ADVERTISEMENT

ಕೆಸರುಗದ್ದೆಯಂತಾದ ಮಂಗಳವಾರದ ಸಂತೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 13:43 IST
Last Updated 6 ಆಗಸ್ಟ್ 2019, 13:43 IST
ಶ್ರವಣಬೆಳಗೊಳದ ಹೊರವಲಯದಲ್ಲಿರುವ ಸಂತೆ ಮೈದಾನ ಮಂಗಳವಾರದ ಜಿಟಿಜಿಟಿ ಮಳೆಗೆ ಕೆಸರು ಗದ್ದೆಯಂತಾಗಿತ್ತು. 
ಶ್ರವಣಬೆಳಗೊಳದ ಹೊರವಲಯದಲ್ಲಿರುವ ಸಂತೆ ಮೈದಾನ ಮಂಗಳವಾರದ ಜಿಟಿಜಿಟಿ ಮಳೆಗೆ ಕೆಸರು ಗದ್ದೆಯಂತಾಗಿತ್ತು.    

ಶ್ರವಣಬೆಳಗೊಳ: ಬೆಳಿಗ್ಗೆಯಿಂದಲೇ ಜಿಟಿ ಜಿಟಿ ಮಳೆ ಸುರಿದ ಕಾರಣ ಇಲ್ಲಿನ ಸಂತೆ ಆವರಣ ಕೆಸರುಗದ್ದೆಯಾಗಿತ್ತು. ಇದರಿಂದಾಗಿ ವರ್ತಕರು, ಗ್ರಾಹಕರು ಪರದಾಡುವಂತಹ ವಾತವಾರಣ ಸಂತೆಯ ದಿನವಾದ ಮಂಗಳವಾರ ನಿರ್ಮಾಣವಾಗಿತ್ತು.

ದಿನಸಿ ಮಾರಾಟಗಾರರು ಟಾರ್ಪಾಲ್‌ ವ್ಯವಸ್ಥೆ ಮಾಡಿಕೊಂಡಿದ್ದರು, ಆದರೆ, ಹಣ್ಣು ತರಕಾರಿ, ಸೊಪ್ಪಿನ ವ್ಯಾಪಾರಿಗಳು ಬಯಲಿನಲ್ಲೇ ಮಳೆಯಲ್ಲಿ ನೆನೆಯುತ್ತ ವ್ಯಾಪಾರ ಮಾಡವಂತಾಯಿತು.

‘ಮಳೆಯಿಂದಾಗಿ ಸಂತೆ ಆವರಣ ಕೆಸರುಮಯವಾದ್ದರಿಂದ ಗ್ರಾಹಕರ ಕೊರತೆ ಎದುರಾಯಿತು. ಇದರಿಂದಾಗಿ ಲಾಭವಿಲ್ಲದೆ ಹಣ್ಣು ತರಕಾರಿ ಮಾರಾಟ ಮಾಡಬೇಕಾಯಿತು’ ಎಂದು ವ್ಯಾಪಾರಿಗಳಾದ ಮಂಜಮ್ಮ, ತಾಯಮ್ಮ, ಮಂಜು ಬೇಸರ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.