
ಪ್ರಜಾವಾಣಿ ವಾರ್ತೆ
ನರೇಂದ್ರ ನಾಯಕ್
ಹಾಸನ: ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ವೇಳೆ ಕೆಂಡ ಹಾಯ್ದಿದ್ದ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರಿಗೆ ರಾಷ್ಟ್ರೀಯ ವಿಚಾರವಾದಿಗಳ ಸಂಘದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಪತ್ರ ಬರೆದಿದ್ದು, ‘ಕಾಯ್ದೆಯಡಿ ಇದು ಅಪರಾಧ’ ಎಂದಿದ್ದಾರೆ.
‘ಕೆಂಡ ಹಾಯಲು ವಿಜ್ಞಾನ ಕಾರಣವೇ ಹೊರತು ದೈವಿಕ ಶಕ್ತಿಯಲ್ಲ. ಕರ್ನಾಟಕ ಮೌಢ್ಯ ನಿಯಂತ್ರಣ ಕಾಯ್ದೆ 2017 ರಡಿ ಇದೊಂದು ಅಪರಾಧ. ಜನರನ್ನು ಬೆಂಕಿಯಲ್ಲಿ ನಡೆಯುವಂತೆ ಒತ್ತಾಯಿಸುವುದನ್ನು ನಿಷೇಧಿಸಲಾಗಿದೆ ಎಂಬುದನ್ನು ಗಮನಿಸಿ’ ಎಂದಿದ್ದಾರೆ.
‘ವೈಜ್ಞಾನಿಕ ಮನೋಭಾವವನ್ನು ಮೂಡಿಸಲು ಹಾಸನದಲ್ಲಿ ವಿವಿಧ ಸಂಸ್ಥೆಗಳ ಕಾರ್ಯಕರ್ತರೊಂದಿಗೆ ಜಾಗೃತಿ ಕಾರ್ಯಕ್ರಮ ನಡೆಸಲು ಉದ್ದೇಶಿಸಿದ್ದೇವೆ. ಅದಕ್ಕಾಗಿ ವ್ಯವಸ್ಥೆ ಮಾಡುತ್ತೀರಿ ಎಂದು ಭಾವಿಸುವೆ’ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.