ADVERTISEMENT

ಹಾಸನ: 'ಪರಿಸರ ಸಂರಕ್ಷಣೆಯಿಂದ ಉತ್ತಮ ಸಮಾಜ'

ಇಕೋ ಕ್ಲಬ್‌ನ ವನ್ಯ ಚೈತನ್ಯ ಕಾರ್ಯಕ್ರಮ ಉದ್ಘಾಟಿಸಿದ ಜಗದೀಶ್‌

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 5:35 IST
Last Updated 1 ಡಿಸೆಂಬರ್ 2025, 5:35 IST
ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ವನ್ಯ ಚೈತನ್ಯ ಕಾರ್ಯಕ್ರಮವನ್ನು ಚೌಡುವಳ್ಳಿ ಜಗದೀಶ್ ಉದ್ಘಾಟಿಸಿದರು
ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ವನ್ಯ ಚೈತನ್ಯ ಕಾರ್ಯಕ್ರಮವನ್ನು ಚೌಡುವಳ್ಳಿ ಜಗದೀಶ್ ಉದ್ಘಾಟಿಸಿದರು   

ಹಾಸನ: ಪರಿಸರ ಸಂರಕ್ಷಣೆಯ ಜವಾಬ್ದಾರಿ ಪ್ರತಿ ನಾಗರಿಕರಲ್ಲಿ ಬಂದಾಗ ಉತ್ತಮ ಸಮಾಜ ನಿರ್ಮಾಣ ಆಗುತ್ತದೆ. ಸಾಲುಮರದ ತಿಮ್ಮಕ್ಕ ಅವರು ಗಿಡ ಮರ ಬೆಳೆಸಲು ತಮ್ಮ ಜೀವಮಾನವನ್ನೇ ಕಳೆದರು. ಅವರಂತೆ ಗಿಡ ಮರಗಳನ್ನು ಬೆಳೆಸುವಲ್ಲಿ ನಮ್ಮಲ್ಲಿ ಜಾಗೃತಿ ಮೂಡಬೇಕು ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜಗದೀಶ್ ಚೌಡುವಳ್ಳಿ ಹೇಳಿದರು.

ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜು ಇಕೋ ಕ್ಲಬ್‌ ವತಿಯಿಂದ ಶನಿವಾರ ಆರಂಭವಾದ ವನ್ಯ ಚೈತನ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿಸರ್ಗಕ್ಕೆ ದೊಡ್ಡ ಕೊಡುಗೆ ಕೊಡಬೇಕು. ವಾಯ್ಯು ಮಾಲಿನ್ಯ, ಉತ್ತಮ ಗಾಳಿ ಸಿಗಬೇಕಾದರೆ ಪರಿಸರ ಸಂರಕ್ಷಣೆ ಅಗತ್ಯ. ಇಕೋ ಕ್ಲಬ್‌ ವಿದ್ಯಾರ್ಥಿಗಳು ನಾನಾ ಚಟುವಟಿಕೆ ಮಾಡುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಪರಿಸರದ ಜಾಗೃತಿ ಮೂಡಿಸಲು ಹಲವಾರು ಸ್ಪರ್ಧೆ ಏರ್ಪಪಡಿಸಿರುವುದು ಸಂತಸದ ವಿಷಯ ಎಂದು ಹೇಳಿದರು.

ADVERTISEMENT

ಮಲೆನಾಡು ಎಂಜಿನಿಯರಿಂಗ್ ಕಾಲೇಜು ಪ್ರಭಾರ ಪ್ರಾಂಶುಪಾಲ ಡಾ.ಎಚ್.ಎಸ್. ನರಸಿಂಹನ್ ಮಾತನಾಡಿ, ನಮ್ಮ ಕಾಲೇಜು ವಿದ್ಯಾರ್ಥಿಗಳು ವನ್ಯ ಚೈತನ್ಯ ಕಾರ್ಯಕ್ರಮದ ಮೂಲಕ ಹಲವು ಕಡೆ ಗಿಡಗಳನ್ನು ನೆಡುವ ಮೂಲಕ ಹಾಗೂ ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣೆಯಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡುವ ಕೆಲಸ ಶ್ಲಾಘನೀಯ ಎಂದರು.

ಅಧ್ಯಕ್ಷತೆ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಖಜಾಂಚಿ ಎಚ್.ಡಿ. ಪಾರ್ಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಫಾರೆಸ್ಟರ್ ಜಯಪಾಲ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಹ ಅಧಿಕಾರಿ ಡಾ.ಶಿವಶಂಕರ್, ಕಾರ್ಯಕ್ರಮ ಸಂಯೋಜಕ ಡಾ.ಡಿ.ಜಿ. ಪ್ರದೀಪ್, ಡಿ.ವಿ. ಶ್ರುತಿ, ಸಂಸ್ಥೆಯ ಮಾಧ್ಯಮ ಸಂಯೋಜಕ ಕಟ್ಟಾಯ ಶಿವಕುಮಾರ್, ಚಂದನ, ಟಾರ್ಗೆಟ್ ಪಿಯು ಕಾಲೇಜು ಪ್ರಾಂಶುಪಾಲ ಎಚ್ ಕೆ.ರಾಹುಲ್, ಇಕೋ ಕ್ಲಬ್‌ ಪದಾಧಿಕಾರಿಗಳು, ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು, ನೌಕರರು ಭಾಗವಹಿಸಿದ್ದರು.

ಎರಡು ದಿನ ನಡೆಯುವ ಕಾರ್ಯಕ್ರಮ: ವನ್ಯ ಜೀವಿ ಚಿತ್ರೋತ್ಸವ ಮರಗಿಡಗಳ ಚಿತ್ರ ಪರ್ದರ್ಶನ; ಪರಿಸರ ಜಾಗೃತಿಗೆ ವಿವಿಧ ಸ್ಪರ್ಧೆ ನಗರದ ವಿವಿಧ ಶಾಲೆಯ 50ಕ್ಕೂ ಅಧಿಕ ಮಕ್ಕಳು ಭಾಗಿ

ಭೌಗೋಳಿಕವಾಗಿ ವಿಶೇಷ ಜಿಲ್ಲೆ

ಹಾಸನ ಜಿಲ್ಲೆ ಭೌಗೋಳಿಕವಾಗಿ ಮಲೆನಾಡು ಅರೆಮಲೆನಾಡು ಬಯಲುಸೀಮೆಯಿಂದ ಕೂಡಿದ್ದು ವಿಶೇಷವಾಗಿ ತಂಪಾದ ಹವಮಾನವಿದೆ. ಇಲ್ಲಿ ಬೆಟ್ಟಗುಡ್ಡಗಳು ಸಮತಟ್ಟು ಪ್ರದೇಶವಾಗಿದ್ದು ಇಲ್ಲಿ ಆನೆ ಹುಲಿ ಸಿಂಹ ಕರಡಿ ಚಿರತೆಯಂಥ ಪ್ರಾಣಿಗಳಿವೆ. ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶವಿದೆ. ಇಲ್ಲಿ ಗಿಡ ಮರ ಬೆಳೆಯುವುದರ ಜೊತೆಗೆ ಪ್ರಾಣಿಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ ಎಂದು ಅರಣ್ಯಾಧಿಕಾರಿ ಲಕ್ಷ್ಮಣ್‌ ನಾಯಕ್ ಹೇಳಿದರು. ಪ್ರತಿವರ್ಷ ಹಾಸನ ಮಲೆನಾಡು ಎಂಜಿನಿಯರಿಂಗ್ ಕಾಲೇಜು ಇಕೋ ಕ್ಲಬ್‌ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕೆಲಸವನ್ನು ವನ್ಯಚೈತನ್ಯದ ಹೆಸರಿನಲ್ಲಿ ಮಾಡುತ್ತಿದ್ದು ಅರಣ್ಯ ಇಲಾಖೆಯ ಸಹಕಾರವಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.