
ಪ್ರಜಾವಾಣಿ ವಾರ್ತೆ
ಸಕಲೇಶಪುರ (ಹಾಸನ): ಪುರಸಭೆ ಮುಖ್ಯಾಧಿಕಾರಿ ಕೊಠಡಿ ಟೇಬಲ್ ಮೇಲಿದ್ದ ಕಡತಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಆರೋಪಿಯನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಕುಶಾಲನಗರ ಬಡಾವಣೆ ನಿವಾಸಿ ನಿಂಗರಾಜು ಬಂಧಿತ. 'ಹೇಮಾವತಿ ಸೇತುವೆ ಸಮೀಪ ತರಕಾರಿ ಮಾರಾಟಕ್ಕೆ ಮುಖ್ಯಾಧಿಕಾರಿ ಅಡ್ಡಿ ಮಾಡುತ್ತಿದ್ದರು. ಅದೇ ಸಿಟ್ಟಿನಿಂದ ಬೆಂಕಿ ಹಚ್ಚಿದೆ ಎಂದು ಹೇಳಿದ್ದಾನೆ’ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.