ADVERTISEMENT

ಹಾಸನ| ₹900 ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ನಿರ್ಮಾಣ : ಶಾಸಕ ಸಿ.ಎನ್. ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 6:45 IST
Last Updated 4 ಮಾರ್ಚ್ 2026, 6:45 IST
ನುಗ್ಗೇಹಳ್ಳಿ ಹೋಬಳಿಯ ಕಲ್ಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿರ್ಮಿಸಿರುವ ನೂತನ ಡೇರಿಯ ಕಟ್ಟಡವನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು 
ನುಗ್ಗೇಹಳ್ಳಿ ಹೋಬಳಿಯ ಕಲ್ಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿರ್ಮಿಸಿರುವ ನೂತನ ಡೇರಿಯ ಕಟ್ಟಡವನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು    

ನುಗ್ಗೇಹಳ್ಳಿ: ಜಿಲ್ಲೆಯಲ್ಲಿ ಡೈರಿ ಉದ್ಯಮಕ್ಕೆ ಉತ್ತೇಜನ ನೀಡಲು ಹಾಸನದ ಕೌಶಿಕ ಬಳಿ ₹900 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.

ಹೋಬಳಿಯ ಕಲ್ಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವತಿಯಿಂದ ನಿರ್ಮಿಸಿರುವ ನೂತನ ಡೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತು  ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಡಿ. ರೇವಣ್ಣ ಅವರ ಪರಿಶ್ರಮದಿಂದ ಜಿಲ್ಲಾ ಕೇಂದ್ರದ ಕೌಶಿಕ ಬಳಿ ಸುಮಾರು ₹900 ಕೋಟಿ ವೆಚ್ಚದಲ್ಲಿ ಕೇಂದ್ರ ಸರ್ಕಾರದ ಹೆಚ್ಚಿನ ನೆರವಿನೊಂದಿಗೆ ನಿರ್ಮಾಣವಾಗುತ್ತಿದೆ ಎಂದರು.

ADVERTISEMENT

ಕಲ್ಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸುಮಾರು ₹12 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪ್ರತಿ ನಿತ್ಯ 850 ಲೀಟರ್ ಹಾಲನ್ನು ರೈತರಿಂದ ಖರೀದಿಸಲಾಗುತ್ತಿದೆ. ಪ್ರತಿ ತಿಂಗಳು ₹10 ಲಕ್ಷ ವಹಿವಾಟು ನಡೆಯುತ್ತಿದೆ. ಸದ್ಯ ಹಾಸನ ಹಾಲು ಒಕ್ಕೂಟದಿಂದ ಪ್ರತಿ ಲೀಟರ್‌ಗೆ ₹35 ನೀಡಲಾಗುತ್ತಿದ್ದು, ಸರ್ಕಾರದ ಸಹಾಯ ಧನ ಸೇರಿ ₹39 ಆಗಲಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಬೆಲೆ ಕುರಿತು ಅಧ್ಯಕ್ಷರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಕಳೆದ 3 ವರ್ಷಗಳಲ್ಲಿ ತಾಲ್ಲೂಕಿನ ರೈತರಿಗೆ ಡೇರಿಗಳ ಮೂಲಕ ಸುಮಾರು ₹5 ಕೋಟಿ ವೆಚ್ಚದಲ್ಲಿ ಮ್ಯಾಟ್‌ಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗಿದೆ. ಹೊಸ ಡೇರಿ ಕಟ್ಟಡ ನಿರ್ಮಾಣಕ್ಕೂ ಕೆಎಂಎಫ್ ಹಾಗೂ ಹಾಸನ ಹಾಲು ಒಕ್ಕೂಟ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೆಚ್ಚಿನ ಅನುದಾನ ಕೊಡಲಾಗುತ್ತಿದೆ. ಗ್ರಾಮಸ್ಥರು ಸಂಘದಲ್ಲಿ ಗುಣಮಟ್ಟದ ಹಾಲನ್ನು ಮಾರಾಟ ಮಾಡುತ್ತಿರುವುದರಿಂದ, ಸಂಘ ಹೆಚ್ಚು ಲಾಭ ಗಳಿಸಲು ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲೂ ಸಂಘ ಹೆಚ್ಚು ಲಾಭಗಳಿಸಲು ಎಲ್ಲ ಸದಸ್ಯರು ಸಹಕಾರ ನೀಡಬೇಕು ಎಂದು ತಿಳಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಕಲ್ಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಪ್ರಭಾಕರ್, ಸಂಘದ ಅಧ್ಯಕ್ಷೆ ಮಂಜುಳಾ ತಿಮ್ಮೇಗೌಡ, ಕೃಷಿ ಪತ್ತಿನ ನಿರ್ದೇಶಕರಾದ ಕಲ್ಕೆರೆ ಅಶೋಕ್, ದೇವರಾಜ್, ಮುಖಂಡರಾದ ನಾಗೇಗೌಡ, ಬೈರೇಗೌಡ, ಎಚ್.ಬಿ. ರಂಗಸ್ವಾಮಿ, ಕಲ್ಕೆರೆ ಲಕ್ಕಪ್ಪ ಗೌಡ, ವಾಸು, ಧರ್ಮಲಿಂಗೇಗೌಡ, ನಾರಾಯಣಸ್ವಾಮಿ, ಗುಡಿ ಗೌಡ ರಂಗೇಗೌಡ, ದೇವಿಗೆರೆ ಈ. ಶಿವಣ್ಣ, ಚೌಡೇನಹಳ್ಳಿ ಜ್ಞಾನೇಂದ್ರ, ಎಲ್ಐಸಿ ಮಂಜೇಗೌಡ, ಹುಲಿಕೆರೆ ಸಂಪತ್ ಕುಮಾರ್, ಸಂಘದ ಕಾರ್ಯದರ್ಶಿ ಸಾವಿತ್ರಮ್ಮ ರಮೇಶ್, ನಿರ್ದೇಶಕರಾದ ನಾಗಮ್ಮ ಶಿವೇಗೌಡ, ಲಕ್ಷ್ಮಮ್ಮ ರಂಗಯ್ಯ, ಕವಿತಾ ಚಂದ್ರೇಗೌಡ, ಲಕ್ಷ್ಮಮ್ಮ ಶಿವೇಗೌಡ, ತಿಮ್ಮಮ್ಮ ರಂಗೇಗೌಡ, ಸುಶೀಲಾ ಸುರೇಶ್, ಆರತಿ ಕುಮಾರ್, ಶೋಭಾ ಹರೀಶ್, ಅನಿತಾ ರಾಮಚಂದ್ರ, ಶಾರದಮ್ಮ ಮಂಜೇಗೌಡ, ಸಂಘದ ಹಾಲು ಪರೀಕ್ಷೆಕಿ ಕಾಳಮ್ಮ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.