ಹಾಸನ: ಅರಸೀಕೆರೆ ತಾಲ್ಲೂಕಿನ ಬಾಣಾವರದಲ್ಲಿ ಮನೆಯ ಬೀಗ ಮುರಿದು ಸುಮಾರು ₹ 3 ಲಕ್ಷ ಮೌಲ್ಯದ ಚಿನ್ನಾಭರಣ, ₹ 2 ಲಕ್ಷ ನಗದು ಹಣ ಕಳವು ಮಾಡಲಾಗಿದೆ.
ಬಾಣಾವರದ ಪೊಲೀಸ್ ಕ್ವಾಟರ್ಸ್ ಹಿಂಭಾಗದ ಬಡಾವಣೆಯಲ್ಲಿ ಅಜ್ಮಲ್ ಖಾನ್ ಎಂಬುವವರು ಲೀಸ್‍ಗೆ ವಾಸವಾಗಿದ್ದು, ಸೆ.20ರಂದು ಸಂಜೆ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಕಡೂರಿಗೆ ಹೋಗಿದ್ದರು. ಸೆ.21 ರಂದು ಬೆಳಿಗ್ಗೆ ವಾಪಸ್ ಮನೆಗೆ ಬಂದು ನೋಡಿದಾಗ, ಮುಂಬಾಗಿಲು ತೆರೆದಿತ್ತು.
ಒಳಗೆ ಹೋಗಿ ನೋಡಿದಾಗ, ರೂಂನಲ್ಲಿದ್ದ ಬೀರುವಿನ ಲಾಕ್ ಮುರಿದು, ಅದರೊಳಗಿದ್ದ 40 ಗ್ರಾಂ ಚಿನ್ನದ ಲಾಂಗ್ ಚೈನ್, 20 ಗ್ರಾಂ ಚಿನ್ನದ ನಕ್ಲೇಸ್ ಮತ್ತು ₹ 2 ಲಕ್ಷ ನಗದು ಕಳವು ಮಾಡಲಾಗಿದೆ. ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ ಜಿಲ್ಲೆಯ ಕೆಂಚನದೊಡ್ಡಿ ಗ್ರಾಮದ ರಾಧಾ ಅವರು, ಪಿತೃಪಕ್ಷದ ಕಾರ್ಯಕ್ರಮಕ್ಕಾಗಿ ತವರೂರಾದ ಮರುಗೂರಿಗೆ ತೆರಳುತ್ತಿದ್ದರು. ಸೆ.22 ರಂದು ಮಧ್ಯಾಹ್ನ ಚನ್ನರಾಯಪಟ್ಟಣದಿಂದ ಮರಗೂರಿಗೆ ತೆರಳುವ ಬಸ್ ಹತ್ತಿದ್ದು, ಟಿಕೆಟ್ ತೆಗೆಸಲು ವ್ಯಾನಿಟಿ ಬ್ಯಾಗ್ ನೋಡಿದಾಗ ಅದು ತೆರೆದಿತ್ತು. ಅದರಲ್ಲಿ ಚಿನ್ನದ ಒಡವೆಗಳು ಕಳವಾಗಿದ್ದವು. ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.