ADVERTISEMENT

ಹಾಸನಾಂಬ ದರ್ಶನೋತ್ಸವದಲ್ಲಿ ದುಡಿದ ಪೌರಕಾರ್ಮಿಕರಿಗೆ ತಾರಾ ಹೋಟೆಲ್‌ನಲ್ಲಿ ಔತಣ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 16:25 IST
Last Updated 24 ಅಕ್ಟೋಬರ್ 2025, 16:25 IST
ಹಾಸನಾಂಬ ಜಾತ್ರೆಯಲ್ಲಿ ಕೆಲಸ ನಿರ್ವಹಿಸಿದ ಪೌರಕಾರ್ಮಿಕರಿಗೆ ಹಾಸನದ ತಾರಾ ಹೋಟೆಲ್‌ನಲ್ಲಿ ಔತಣ ನೀಡಲಾಯಿತು.
ಹಾಸನಾಂಬ ಜಾತ್ರೆಯಲ್ಲಿ ಕೆಲಸ ನಿರ್ವಹಿಸಿದ ಪೌರಕಾರ್ಮಿಕರಿಗೆ ಹಾಸನದ ತಾರಾ ಹೋಟೆಲ್‌ನಲ್ಲಿ ಔತಣ ನೀಡಲಾಯಿತು.   

ಹಾಸನ: ಹಾಸನಾಂಬ ದರ್ಶನೋತ್ಸವದಲ್ಲಿ ದುಡಿದ ಪೌರಕಾರ್ಮಿಕರಿಗೆ ತಾರಾ ಹೋಟೆಲ್‌ನಲ್ಲಿ ಔತಣ ನೀಡಿ ಪಾಲಿಕೆ ಅಧಿಕಾರಿಗಳು ಗೌರವ ಸಲ್ಲಿಸಿದರು. ಇದೇ ಮೊದಲು ಹೀಗೆ ವಿಶೇಷ ಗೌರವ ಸಲ್ಲಿಸಿದ್ದು, ವಿವಿಧ ಭಕ್ಷ್ಯಗಳನ್ನು ಬಡಿಸಿ ಕೃತಜ್ಞತೆ ಸಲ್ಲಿಸಿದರು.

15 ದಿನದಿಂದ ನಿರಂತರವಾಗಿ ಹಾಸನಾಂಬ ದೇವಿ, ಸಿದ್ದೇಶ್ವರ ಸ್ವಾಮಿ ದೇವಾಲಯದ ಸುತ್ತ ಸೇರಿ ನಗರವನ್ನು ಸ್ವಚ್ಛವಾಗಿಡಲು 170 ಪೌರಕಾರ್ಮಿಕರು ಶ್ರಮಿಸಿದ್ದರು.

ಹಾಸನಾಂಬ ಜಾತ್ರೆಯಲ್ಲಿ ಕೆಲಸ ನಿರ್ವಹಿಸಿದ ಪೌರಕಾರ್ಮಿಕರಿಗೆ ಹಾಸನದ ತಾರಾ ಹೋಟೆಲ್‌ನಲ್ಲಿ ಔತಣ ನೀಡಲಾಯಿತು.

ಇವರಿಗಾಗಿ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ಎಂಜಿನಿಯರ್‌ ಕವಿತಾ ಅವರು ಔತಣ ಕೂಟ ಏರ್ಪಡಿಸಿದ್ದರು. ಪಾಲಿಕೆಯ ಈ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.