ADVERTISEMENT

ಹಾಸನ | ಭಾರಿ ಮಳೆ, ಗಾಳಿಗೆ ನೆಲಕಚ್ಚಿದ ಬಾಳೆ

​ಪ್ರಜಾವಾಣಿ ವಾರ್ತೆ
Published 27 ಮೇ 2020, 17:30 IST
Last Updated 27 ಮೇ 2020, 17:30 IST
ಮಂಗಳವಾರ ಸಂಜೆ ಭಾರಿ ಮಳೆ, ಗಾಳಿಗೆ ನುಗ್ಗೇಹಳ್ಳಿ ಗ್ರಾಮದ ರೈತ ದೇವರಾಜು ಅವರ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ನೆಲಕಚ್ಚಿರುವುದು
ಮಂಗಳವಾರ ಸಂಜೆ ಭಾರಿ ಮಳೆ, ಗಾಳಿಗೆ ನುಗ್ಗೇಹಳ್ಳಿ ಗ್ರಾಮದ ರೈತ ದೇವರಾಜು ಅವರ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ನೆಲಕಚ್ಚಿರುವುದು   

ನುಗ್ಗೇಹಳ್ಳಿ: ಹೋಬಳಿಯ ಸುತ್ತಮುತ್ತ ಮಂಗಳವಾರ ಸಂಜೆ ಬಿದ್ದ ಭಾರಿ ಮಳೆ ಗಾಳಿಗೆ ಸುಮಾರು 200 ತೆಂಗಿನ ಮರಗಳು ಸೇರಿದಂತೆ ಬಾಳೆ, ಮಾವು ಬೆಳೆಗಳು ನೆಲಕಚ್ಚಿವೆ.

ಹೋಬಳಿಯ ಸುತ್ತಮುತ್ತ ಬಿದ್ದ ಭಾರಿ ಮಳೆ, ಗಾಳಿಗೆ ತೆಂಗಿನ ಮರ ಸೇರಿದಂತೆ ಸುಮಾರು 60 ರಿಂದ 65 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆ ಬಹುತೇಕ ನೆಲಕಚ್ಚಿದ್ದು ಬಾರಿ ಬಿರುಗಾಳಿ ಆಲಿಕಲ್ಲಿಗೆ ಮಾವಿನ ಬೆಳೆಗೆ ಹಾನಿ ಉಂಟಾಗಿದೆ. ಸುಮಾರು 38.8 ಮಿ.ಮೀ.ನಷ್ಟು ಮಳೆಯಾಗಿದೆ.

ಸ್ಥಳಕ್ಕೆ ಹೋಬಳಿ ಕಂದಾಯ ಅಧಿಕಾರಿ ಲೋಕೇಶ್, ಗ್ರಾಮಲೆಕ್ಕಿಗ ಶ್ರೀನಿವಾಸರಾವ್ ಭೇಟಿ ನೀಡಿ ಹಾನಿಗೊಳಗಾಗಿರುವ ರೈತರಿಂದ ಮನವಿ ಸ್ವೀಕರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.