ADVERTISEMENT

‌ಗುಡುಗು ಸಹಿತ ಧಾರಾಕಾರ ಮಳೆ

‌ಹಲವು ರಸ್ತೆ ಜಲಾವೃತ, ವಾಹನ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 16 ಮೇ 2022, 14:48 IST
Last Updated 16 ಮೇ 2022, 14:48 IST
ಹಾಸನ ದೇವಿಗೆರೆ ವೃತ್ತ ಜಲಾವೃತಗೊಂಡಿತ್ತು
ಹಾಸನ ದೇವಿಗೆರೆ ವೃತ್ತ ಜಲಾವೃತಗೊಂಡಿತ್ತು   

ಹಾಸನ: ನಗರ ಹಾಗೂ ಜಿಲ್ಲೆಯ ವಿವಿಧೆಡೆ ಸೋಮವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿಯಿತು.

ಕೆಲ ದಿನಗಳಿಂದ ತುಂತುರು ಮಳೆಯಷ್ಟೇ ಇತ್ತು. ಗುಡುಗು ಸಹಿತ ರಭಸದ ಮಳೆ ಸುರಿದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ತಗ್ಗು ಪ್ರದೇಶ ಜಲಾವೃತ್ತವಾಗಿದ್ದವು. ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಪಾದಚಾರಿಗಳು, ವಾಹನ ಸವಾರರು ಪರದಾಡಿದರು.

ನಗರದಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ಬಳಿಕ ಶುರುವಾದ ಮಳೆ ಒಂದು ತಾಸಿಗೂ ಹೆಚ್ಚು ಕಾಲ ಸುರಿಯಿತು. ದೇವಿಗೆರೆ ವೃತ್ತ, ಮಹಾವೀರ ವೃತ್ತ, ಬಿ.ಎಂ. ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ ಆಯಿತು.

ADVERTISEMENT

ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ವರ್ತಕರು ಹಾಗೂ ಗ್ರಾಹಕರಿಗೆ ಸಾಕಷ್ಟು ತೊಂದರೆ ಆಯಿತು. ರಸ್ತೆಬದಿ ವ್ಯಾಪಾರಕ್ಕೂ ಹೊಡೆತ ಬಿತ್ತು. ಸಂಜೆವರೆಗೂ ಬಿಟ್ಟು ಬಿಟ್ಟು ಮಳೆಯಾಯಿತು.ಶಾಲೆ ಆರಂಭವಾದ ಮೊದಲ ದಿನವೇ ಮಳೆ ಆರ್ಭಟಿಸಿದ್ದರಿಂದ, ಕೊಡೆ ಮನೆಯಲ್ಲೇ ಬಿಟ್ಟು ಬಂದಿದ್ದ ಮಕ್ಕಳು, ಮಳೆ ನಿಲ್ಲುವವರೆಗೆ ಶಾಲೆ ಬಳಿ ಕಾದು ನಿಂತಿದ್ದ ದೃಶ್ಯ ಕಂಡು ಬಂತು.

ಬೇಲೂರು, ಹಳೇಬೀಡು, ಸಕಲೇಶಪುರ, ಹೆತ್ತೂರು ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ನುಗ್ಗೇಹಳ್ಳಿ, ಹಿರೀಸಾವೆಯಲ್ಲಿ ಸಾಧಾರಣ ಮಳೆಯಾಗಿದೆ. ಅರಕಲಗೂಡು, ಆಲೂರಿನಲ್ಲಿ ಮೋಡ ಕವಿದ ವಾತಾವರಣ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.