
ಪ್ರಜಾವಾಣಿ ವಾರ್ತೆ
ಹೊಳೆನರಸೀಪುರ: ಗೆಳೆಯರೊಂದಿಗೆ ಕೇರಳದ ಕಣ್ಣೂರಿಗೆ ತೆರಳಿದ್ದ ಹೊಳೆನರಸೀಪುರದ ದಿ.ತನ್ವೀರ್ ಅಹಮದ್ ಅವರ ಪುತ್ರ ಅಫ್‌ನಾನ್ ಅಹಮದ್ ಅಲ್ಲಿನ ಪಯ್ಯಂಬಳಂ ತೀರದ ಸಮುದ್ರದಲ್ಲಿ ಕೊಚ್ಚಿಹೋಗಿದ್ದಾರೆ.
ಮಂಗಳೂರಿನ ಅಲ್‌ಅಮೀನ್ ಕಾಲೇಜಿನಲ್ಲಿ ಓದುತ್ತಿದ್ದ ಅವರು 11 ಜನರ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿ ಕಣ್ಣೂರಿನ ರೆಸಾರ್ಟ್ ಒಂದರಲ್ಲಿ ಉಳಿದುಕೊಂಡಿದ್ದರು. ಅವರಲ್ಲಿ 8 ಯುವಕರು ಸಮುದ್ರದಲ್ಲಿ ಸ್ನಾನಕ್ಕೆಂದು ಶುಕ್ರವಾರ ತೆರಳಿದ್ದರು. ಸ್ನೇಹಿತನೊಬ್ಬ ಸಮುದ್ರದಲ್ಲಿ ಕೊಚ್ಚಿಹೋಗುತ್ತಿದ್ದು, ಅವನನ್ನು ರಕ್ಷಿಸಲು ಹೋದ ಮತ್ತಿಬ್ಬರೂ ನೀರುಪಾಲಾಗಿದ್ದಾರೆ.
ಪೊಲೀಸರು, ನುರಿತ ಮುಳುಗುತಜ್ಞರು ಹಾಗೂ ಮೀನುಗಾರರ ಸಹಾಯ ಪಡೆದು ಭಾನುವಾರ ಬೆಳಿಗ್ಗೆ ಮೃತದೇಹಗಳನ್ನು ಹೊರತೆಗೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.