ADVERTISEMENT

ಹಾಸನ | 6 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

202 ಜನರಿಗೆ ಕೋವಿಡ್‌, ಮತ್ತೆ 6 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 16:43 IST
Last Updated 24 ಆಗಸ್ಟ್ 2020, 16:43 IST
   

ಹಾಸನ: ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ ಸೋಮವಾರ 6 ಮಂದಿ ಮೃತಪಟ್ಟಿದ್ದು, ಈವರೆಗೆ ಮೃತರ ಸಂಖ್ಯೆ 165ಕ್ಕೆ ಏರಿಕೆಯಾಗಿದೆ. ಹೊಸದಾಗಿ 202 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 6172ಕ್ಕೆ ಏರಿಕೆಯಾಗಿದೆ.

ಅರಕಲಗೂಡು ತಾಲ್ಲೂಕಿನ 85 ವರ್ಷದ ವೃದ್ಧ, ಹಾಸನ ತಾಲ್ಲೂಕಿನ 70 ವರ್ಷದ ವೃದ್ಧೆ ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಬೇಲೂರು ತಾಲ್ಲೂಕಿನ 40 ವರ್ಷದ ಮಹಿಳೆ, 58 ವರ್ಷದ ಪುರುಷ, ಹೊಳೆನರಸೀಪುರ ತಾಲ್ಲೂಕಿನ 55 ವರ್ಷದ ಮಹಿಳೆ, ಹಾಸನ ತಾಲ್ಲೂಕಿನ 85 ವರ್ಷದ ವೃದ್ಧೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ 1910 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ
ಬಿಡುಗಡೆಯಾದ 151 ಜನ ಸೇರಿದಂತೆ ಈವರೆಗೆ 4097 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 62 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಹೊಸದಾಗಿ ಅರಸೀಕೆರೆ 29, ಚನ್ನರಾಯಪಟ್ಟಣ 18, ಆಲೂರು 12, ಹಾಸನ 81, ಹೊಳೆನರಸೀಪುರ 11, ಅರಕಲಗೂಡು 22, ಬೇಲೂರು 16, ಸಕಲೇಶಪುರ 12 ಹಾಗೂ ಹೊರ ಜಿಲ್ಲೆಯ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.