ADVERTISEMENT

ಬೆಳೆಗಳ ಸಂರಕ್ಷಣೆಗೆ ‌ಹೈಟೆಕ್ ಸ್ಪರ್ಶ: ಅಧ್ಯಯನ

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 15:39 IST
Last Updated 17 ಜುಲೈ 2023, 15:39 IST

ಹಾಸನ: ಜುಲೈ 22 ರಿಂದ 6 ದಿನಗಳ ಕಾಲ ಇಸ್ರೇಲ್ ಪ್ರವಾಸ ಕೈಗೊಳ್ಳುತ್ತಿದ್ದು, ಬೆಳೆಗಳ ಸುದೀರ್ಘ ಸಂಸ್ಕರಣೆಗೆ ಹೈಟೆಕ್ ತಂತ್ರಜ್ಞಾನ ಬಳಕೆ ಹಾಗೂ ತೆಂಗು ಮತ್ತು ಕಾಫಿ ಬೆಳೆಗಳ ‘ಕೋ ಕೋ ಕಾಫಿ’ ಎನ್ನುವ ಬ್ರಾಂಡ್ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ಒಡನಹಳ್ಳಿ ನ್ಯಾನೋ ಫುಡ್ ಪಾರ್ಕ್ ಮುಖ್ಯಸ್ಥ ಅಶೋಕ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರು ದಿನ ನಾನು ಮತ್ತು ಟಿ.ಕೆ. ನಾಗರಾಜ್ ಅವರು ಇಸ್ರೇಲ್ ಪ್ರವಾಸ ಕೈಗೊಳ್ಳುತ್ತಿದ್ದೇವೆ. ಈ ಪ್ರವಾಸದ ಮೂಲಕ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಾನಾ ತಂತ್ರಜ್ಞಾನದ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು’ ಎಂದರು.

ಇತ್ತೀಚಿಗೆ ರಾಜ್ಯ ಬಜೆಟ್‌ನಲ್ಲಿಯೂ ನವೋದ್ಯಮಕ್ಕೆ ಉತ್ತೇಜನ ನೀಡುವ ಕುರಿತು ಉಲ್ಲೇಖಿಸಿದ್ದು, ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಗೆ ಹೊಸ ರೂಪುರೇಷೆ ನೀಡಲು ಪ್ರವಾಸ ಅನುಕೂಲವಾಗಲಿದೆ ಎಂದರು.

ADVERTISEMENT

ಈಗಾಗಲೇ ತೆಂಗಿನಕಾಯಿ ಉತ್ಪನ್ನಗಳನ್ನು  ಬಿಡುಗಡೆಗೊಳಿಸಲಾಗಿದ್ದು, ಹಾಸನ ಜಿಲ್ಲೆಯ ತೆಂಗಿನ ಹಾಲಿನ ರುಚಿ ಮತ್ತು ಕೋವಾ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ದೊರೆಯುತ್ತಿರುವುದು ಸಾಬೀತಾಗಿದೆ ಎಂದು ತಿಳಿಸಿದರು.

ಒಡನಹಳ್ಳಿ ನ್ಯಾನೋ ಪುಡ್‌ಪಾರ್ಕ್ ಹೆಸರನ್ನು ಇನ್ನು ಮುಂದೆ ಹಾಸನ ಮೆಗಾ ಫುಡ್ ಪಾರ್ಕ್ ಆಗಿ ಪರಿವರ್ತಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.