ADVERTISEMENT

ಉಕ್ರೇನ್‌ನಲ್ಲಿರುವರನ್ನು ಸುರಕ್ಷಿತವಾಗಿ ಕರೆತರುವುದು ಸರ್ಕಾರದ ಕರ್ತವ್ಯ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 15:45 IST
Last Updated 2 ಮಾರ್ಚ್ 2022, 15:45 IST
ಎಚ್.ಡಿ. ದೇವೇಗೌಡ
ಎಚ್.ಡಿ. ದೇವೇಗೌಡ   

ಹಾಸನ: ‘ಉಕ್ರೇನ್‌ನಲ್ಲಿ ಸಿಲುಕಿರುವ ಹಾಸನ, ಕರ್ನಾಟಕದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರುವುದು ಸರ್ಕಾರಗಳ ಆದ್ಯ ಕರ್ತವ್ಯ’ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ ಹೇಳಿದರು.

ಮಹಾಶಿವರಾತ್ರಿ ಅಂಗವಾಗಿ ಹುಟ್ಟೂರು ಹರದನಹಳ್ಳಿಯ ದೇವೇಶ್ವರನಿಗೆ ಕುಟುಂಬ ಸಮೇತರಾಗಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರುಮಾತನಾಡಿದರು.

‘ಈಗಾಗಲೇ ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದೇನೆ. ಟ್ವೀಟ್ ಕೂಡಾ ಮಾಡಿದ್ದೇನೆ. ದೇಶದಲ್ಲಿ ಹಲವು ರಾಜಕೀಯ ಪಕ್ಷಗಳಿವೆ. ರಾಜಕೀಯ ಕಾರಣಕ್ಕೆಹೊರಗಿನವರಿಗೆ ಒಗ್ಗಟ್ಟು ಇಲ್ಲ ಎಂಬುದನ್ನು ತೋರಿಸುವುದು ಬೇಡ’ ಎಂದು ವಿನಂತಿಸಿದರು.

ADVERTISEMENT

‘ದೇಶದ ಅಂದಾಜು 20 ಸಾವಿರ ವಿದ್ಯಾರ್ಥಿಗಳು ಅಲ್ಲಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆ ತರುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ರಾಜ್ಯದ ವಿದ್ಯಾರ್ಥಿಗಳೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನೂ ಸುರಕ್ಷಿತವಾಗಿ ಕರೆ ತರಬೇಕಿದೆ. ಹಾವೇರಿ ವಿದ್ಯಾರ್ಥಿ ಮೃತಪಟ್ಟಿರುವುದು ದುರ್ದೈವ. ಇದುಕೇವಲ ಕರ್ನಾಟಕದ ಪ್ರಶ್ನೆಯಲ್ಲ ಇಡೀ ದೇಶವೇ ಆಂತಕದಲ್ಲಿದೆ’ ಎಂದುಕಳವಳ ವ್ಯಕ್ತಪಡಿಸಿದರು.

‘ಹಾಸನದ ಗಗನ್‍ಗೌಡ ಸೇರಿ ಉಳಿದವರ ಬಗ್ಗೆಯೂ ಸಚಿವರು, ನೋಡಲ್ಅಧಿಕಾರಿಗಳು, ವಿದೇಶಾಂಗ ಕಾರ್ಯದರ್ಶಿ ಅವರೊಂದಿಗೂ ಮಾತಾಡಿದ್ದೇನೆ’ ಎಂದರು.

‘ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವ ಪ್ರಶ್ನೆ ಇಲ್ಲ.ಕೇವಲ ಹಾಸನ ಅಲ್ಲ, ಇಡೀ ರಾಜ್ಯದ ವಿದ್ಯಾರ್ಥಿಗಳ ಪ್ರಶ್ನೆ. ಈ ಸಂದರ್ಭದಲ್ಲಿಸರ್ಕಾರವನ್ನು ದೂಷಣೆ ಮಾಡಲ್ಲ. ಅಲ್ಲಿರುವ ವಿದ್ಯಾರ್ಥಿಗಳನ್ನು ಹೇಗೆ ಕರೆ ತರಬೇಕೆಂದು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನದಲ್ಲಿ ತಪ್ಪುಹುಡುಕುವ ಯತ್ನ ಮಾಡಲ್ಲ’ ಎಂದರು.

‘ರಾಜ್ಯದ ಕೆಲ ವಿದ್ಯಾರ್ಥಿಗಳು ರಕ್ಷಣೆಗಾಗಿ ಬಂಕರ್‌ಗೆ ಹೋಗಿಸೇರಿಕೊಂಡಿದ್ದಾರೆ. ಅವರಿಗೆ ಬಿಸ್ಕೆಟ್ ಕೂಡಾ ಸಿಕ್ತಾ ಇಲ್ಲ’ ಎಂದು ಕಳವಳವ್ಯಕ್ತಪಡಿಸಿದರು.

‘ಪ್ರಧಾನಿ ಅವರು ಎರಡು ದೇಶಗಳೊಂದಿಗೆ ಮಾತನಾಡಿ, ಸಮಸ್ಯೆ ಹೇಗೆಬಗೆಹರಿಸಬಹುದು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಪುಟಿನ್ ತಮ್ಮನಿಲುವಿಗೆ ಅಂಟಿಕೊಂಡಿದ್ದಾರೆ. ಪ್ರಧಾನಿ ಪುಟಿನ್ ಅವರಿಗೆ ಒಳ್ಳೆಯ ಸ್ನೇಹಿತರು.ಹಾಗಾಗಿ ಸಾಧ್ಯವಾದಷ್ಟು ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡುತ್ತಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಉಕ್ರೇನ್‍ನಲ್ಲಿ ರಾಜ್ಯದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಬಳಿಕ ಎಲ್ಲೆಡೆ ಆತಂಕಹೆಚ್ಚಾಗಿದೆ. ನಾನೊಬ್ಬ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯನಾಗಿ ಸುಮ್ಮನೇಕೂತಿಲ್ಲ. ಸಮಸ್ಯೆ ಬಗೆಹರಿಸಲು ಕೈಲಾದ ಸಹಾಯ ಮಾಡುತ್ತಿದ್ದೇನೆ’ ಎಂದರು.

‘ಪ್ರತಿವರ್ಷದಂತೆ ಈ ವರ್ಷವೂ ನನ್ನ ಕುಲದೇವರ ಸನ್ನಿಧಿಗೆ ಕುಟುಂಬ ಸಮೇತಬಂದು ಪೂಜೆ ಸಲ್ಲಿಸಿದ್ದೇನೆ. ಇನ್ನೆರಡು ತಿಂಗಳು ತುಂಬಿದರೆ 90 ವರ್ಷಆಗಲಿದೆ. ದೇವರಲ್ಲಿ ಆರೋಗ್ಯ, ಆಯಸ್ಸು ಕೇಳಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.