ADVERTISEMENT

ಹಲಸು ತಿನ್ನಲು ಊರಿಗೆ ಬಂದ ಕರಡಿಗಳು: ಇಲಾಖೆಯಿಂದ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 18:59 IST
Last Updated 19 ಜೂನ್ 2019, 18:59 IST
ಜಾಜೂರು ಗ್ರಾಮದಲ್ಲಿ ಶಿವಲಿಂಗಪ್ಪ ನವರ ತೋಟದಲ್ಲಿ ಸೆರೆ ಸಿಕ್ಕ ಎರಡು ಕರಡಿಗಳು
ಜಾಜೂರು ಗ್ರಾಮದಲ್ಲಿ ಶಿವಲಿಂಗಪ್ಪ ನವರ ತೋಟದಲ್ಲಿ ಸೆರೆ ಸಿಕ್ಕ ಎರಡು ಕರಡಿಗಳು   

ಅರಸೀಕೆರೆ (ಹಾಸನ ಜಿಲ್ಲೆ): ತಾಲ್ಲೂಕಿನ ಜಾಜೂರು ಗ್ರಾಮದ, ಶಿವಲಿಂಗಪ್ಪ ಅವರ ತೋಟದ ತಂತಿ ಬೇಲಿಗೆ ಅಳವಡಿಸಿದ್ದ ಉರುಳಿಗೆ ಸಿಲುಕಿದ್ದ ಎರಡು ಕರಡಿಗಳನ್ನು ಬುಧವಾರ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ.

‘ಆಹಾರ ಅರಸಿ ಬಂದಿದ್ದ ಕರಡಿಗಳು, ಹಂದಿಗಳನ್ನು ಸೆರೆ ಹಿಡಿಯಲು ಹಾಕಿದ್ದ ಉರುಳಿಗೆ ಸಿಕ್ಕಿ ಹಾಕಿಕೊಂಡಿದ್ದವು. ಅವುಗಳನ್ನು ರಕ್ಷಿಸಲಾಗಿದ್ದು, ಸಮೀಪದಲ್ಲೇ ಇರುವ ಹಿರೇಕಲ್ಲು ಗುಡ್ಡಕ್ಕೆ ಬಿಡಲಾಗುವುದು. ತಂತಿಬೇಲಿಗೆ ಉರುಳು ಅಳವಡಿಸಿದ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT