ADVERTISEMENT

ಶ್ರವಣಬೆಳಗೊಳದಲ್ಲಿ ಜ.6 ರಿಂದ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 19:58 IST
Last Updated 26 ಡಿಸೆಂಬರ್ 2025, 19:58 IST
ಎಸ್.ಎಂ. ಸನ್ಮತಿಕುಮಾರ ಶಾಸ್ತ್ರಿ
ಎಸ್.ಎಂ. ಸನ್ಮತಿಕುಮಾರ ಶಾಸ್ತ್ರಿ   

ಚನ್ನರಾಯಪಟ್ಟಣ: ‘ಶ್ರವಣಬೆಳಗೊಳದಲ್ಲಿ ಜನವರಿ 6 ರಿಂದ ಎರಡು ದಿನ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕ ಸಮ್ಮೇಳನ ನಡೆಯಲಿದೆ. ವಾಸ್ತು ಹಾಗೂ ಜ್ಯೋತಿಷ್ಯ ಸಲಹೆಗಾರ ಪಾದೂರ ಸುದರ್ಶನ ಕುಮಾರ ಇಂದ್ರ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೂರು ದಶಕದ ಹಿಂದೆ ಅಸ್ತಿತ್ವಕ್ಕೆ ಬಂದ ಸಂಘವು 5 ವರ್ಷಗಳಿಗೊಮ್ಮೆ ಸಮ್ಮೇಳನವನ್ನು ಆಯೋಜಿಸುತ್ತಿದೆ.   

‘ಕಾನಜಿ ಯಾತ್ರಿಕಾಶ್ರಮದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ 500 ಅರ್ಚಕರು ಪಾಲ್ಗೊಳ್ಳಲಿದ್ದು, ಅರ್ಚಕರ ಸಮಸ್ಯೆಗಳನ್ನು ಚರ್ಚಿಸಿ, ನಿರ್ಣಯಗಳನ್ನು ಕೈಗೊಳ್ಳಲಾಗುವುದು’ ಎಂದು ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕ ಸಂಘದ ಅಧ್ಯಕ್ಷ ಎಸ್.ಎಂ. ಸನ್ಮತಿಕುಮಾರಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಎಚ್.ಪಿ. ಮೋಹನ್‍ಕುಮಾರ ಶಾಸ್ತ್ರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT