ಚನ್ನರಾಯಪಟ್ಟಣ: ಪೊಲೀಸರೆಂದು ಪರಿಚಯಿಸಿಕೊಂಡು ಮನೆಗೆ ನುಗ್ಗಿರುವ ನಾಲ್ವರು, ₹ 75 ಸಾವಿರ ಮೌಲ್ಯದ 25 ಗ್ರಾಂ ಚಿನ್ನಾಭರಣ ಕಳವು ಮಾಡಿರುವ ಘಟನೆ ತಾಲ್ಲೂಕಿನ ಗೌಡಗೆರೆ ಹೊಸೂರು ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಲವಣ್ಣಗೌಡ ಎಂಬುವವರ ತೋಟದ ಮನೆಯಲ್ಲಿ ಈ ಪ್ರಕರಣ ನಡೆದಿದೆ. ಇನೊವಾ ಕಾರಿನಲ್ಲಿ ಬಂದ ನಾಲ್ವರು, ಪೊಲೀಸರೆಂದು ನಂಬಿಸಿ ಮನೆ ಪ್ರವೇಶಿಸಿದ್ದಾರೆ. ನಿಮ್ಮ ಮಗ ಬೆಂಗಳೂರಿನಲ್ಲಿ ಕಳ್ಳತನ ಮಾಡಿ ಬಂದಿದ್ದಾನೆ ಎಂದಿದ್ದಾರೆ. ನನ್ನ ಮಗ ಚಾಮರಾಜನಗರದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಲವಣ್ಣಗೌಡ ಹೇಳಿದ್ದಾರೆ. ಆಗ ಕುಟುಂಬದವರನ್ನು ಹೆದರಿಸಿ ಒಂದೆಡೆ ಕೂರಿಸಿ, ಬೀರುವಿನಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.