ADVERTISEMENT

ಹೆತ್ತೂರು: ತುಂತುರು ಮಳೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 2:50 IST
Last Updated 25 ಸೆಪ್ಟೆಂಬರ್ 2020, 2:50 IST
ಯಸಳೂರು ಹೋಬಳಿಯ ಬಾಳೆಕೇರಿ ಗ್ರಾಮದಲ್ಲಿ ಅತಿಯಾದ ಶೀತದಿಂದ ಕಾಫಿ ಉದುರುತ್ತಿರುವುದು
ಯಸಳೂರು ಹೋಬಳಿಯ ಬಾಳೆಕೇರಿ ಗ್ರಾಮದಲ್ಲಿ ಅತಿಯಾದ ಶೀತದಿಂದ ಕಾಫಿ ಉದುರುತ್ತಿರುವುದು   

ಹೆತ್ತೂರು: ಮಲೆನಾಡು ವ್ಯಾಪ್ತಿಯಲ್ಲಿ ಬಿಡುವು ನೀಡಿದ್ದ ಮಳೆ ಗುರುವಾರದಿಂದ ಬಿಡುವು ನೀಡಿ ತುಂತುರಾಗಿ ಸುರಿಯುತ್ತಿದೆ.

ಗುರುವಾರ ಬೆಳಿಗ್ಗೆಯ ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ ಹೆತ್ತೂರಿನಲ್ಲಿ 13 ಮಿ.ಮೀಟರ್ ಮಳೆಯಾಗಿದೆ. ಅಲ್ಪ ಪ್ರಮಾಣದ ಗಾಳಿ ಮುಂದುವರಿದಿದ್ದು, ಯಸಳೂರು, ಹೆತ್ತೂರು ಹೋಬಳಿಯದ್ಯಾಂತ ಚಳಿಯ ವಾತವಾರಣವಿದೆ. ಬಿಸಿಲೆ ಘಾಟಿ ಪ್ರದೇಶದಲ್ಲಿ ಮಂಜು ಕವಿಯುತ್ತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ವಾರದಿಂದ ಸುರಿದ ಮಳೆಯಿಂದ ಶೀತದ ಪ್ರಮಾಣ ಹೆಚ್ಚಳವಾಗಿದ್ದು, ಕಾಫಿ, ಕಾಳು ಮೆಣಸು ಉದುರಲು ಪ್ರಾರಂಭಿಸಿದೆ. ಚಿಕ್ಕಂದೂರು, ಹಳ್ಳಿಗದ್ದೆ, ಉಚ್ಚಂಗಿ, ಜಾತಹಳ್ಳಿ, ವಣಗೂರು ಭಾಗಗಳಲ್ಲಿ ಶುಂಠಿ ಬೆಳೆಗೆ ಕೊಳೆ ರೋಗ ಹರಡುವ ಭೀತಿ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT