ADVERTISEMENT

ಕಸ್ತೂರಬಾ ಗಾಂಧಿ ಸ್ಮಾರಕ ಪ್ರವಾಸಿ ತಾಣವಾಗಲಿ: ಶಾಸಕ ಶಿವಲಿಂಗೇಗೌಡ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 16:28 IST
Last Updated 2 ಅಕ್ಟೋಬರ್ 2021, 16:28 IST
ಅರಸೀಕೆರೆಯ  ಕಸ್ತೂರಬಾ ಗಾಂಧಿ ಸ್ಮಾರಕ ಆಶ್ರಮದಲ್ಲಿ ಮಹಾತ್ಮ ಗಾಂಧೀಜಿ ಜಯಂತಿ ನಿಮಿತ್ತ ಶಾಸಕ ಕೆ.ಎಂ. ಶಿವಲಿಂಗೇಗೌಡ ಗಾಂಧೀಜಿ ಪ್ರತಿಮೆ ಹಾಗೂ ಚಿತಾಭಸ್ಮ ಸಮಾಧಿಗೆ  ಪುಷ್ಪನಮನ ಸಲ್ಲಿಸಿದರು. ತಹಶೀಲ್ದಾರ್ ಸಂತೋಷ್ ಕುಮಾರ್, ತಾ.ಪಂ.ತಿ ಇ ಒ ನಟರಾಜ್, ನಗರಸಭೆ ಅಧ್ಯಕ್ಷ ಗಿರೀಶ್, ಜಿ.ವಿ.ಟಿ. ಬಸವರಾಜ್, ಎನ್.ಡಿ. ಪ್ರಸಾದ್, ಉಷಾ ಅಬ್ರೌಲ್ ಹಾಗೂ ಅನಂತಕುಮಾರ್ ಇದ್ದರು
ಅರಸೀಕೆರೆಯ  ಕಸ್ತೂರಬಾ ಗಾಂಧಿ ಸ್ಮಾರಕ ಆಶ್ರಮದಲ್ಲಿ ಮಹಾತ್ಮ ಗಾಂಧೀಜಿ ಜಯಂತಿ ನಿಮಿತ್ತ ಶಾಸಕ ಕೆ.ಎಂ. ಶಿವಲಿಂಗೇಗೌಡ ಗಾಂಧೀಜಿ ಪ್ರತಿಮೆ ಹಾಗೂ ಚಿತಾಭಸ್ಮ ಸಮಾಧಿಗೆ  ಪುಷ್ಪನಮನ ಸಲ್ಲಿಸಿದರು. ತಹಶೀಲ್ದಾರ್ ಸಂತೋಷ್ ಕುಮಾರ್, ತಾ.ಪಂ.ತಿ ಇ ಒ ನಟರಾಜ್, ನಗರಸಭೆ ಅಧ್ಯಕ್ಷ ಗಿರೀಶ್, ಜಿ.ವಿ.ಟಿ. ಬಸವರಾಜ್, ಎನ್.ಡಿ. ಪ್ರಸಾದ್, ಉಷಾ ಅಬ್ರೌಲ್ ಹಾಗೂ ಅನಂತಕುಮಾರ್ ಇದ್ದರು   

ಅರಸೀಕೆರೆ: ‘ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 80ರಷ್ಟು ಜನರು ಕೃಷಿಯನ್ನೇ ಮುಖ್ಯ ಕಸುಬನ್ನಾಗಿಸಿಕೊಂಡು ಬದುಕುತ್ತಿದ್ದಾರೆ. ಮಹಾತ್ಮ ಗಾಂಧೀಜಿ ಅವರ ಆಶಯದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಾರ್ವಭೌಮತೆಗೆ ಒತ್ತು ನೀಡಬೇಕು’ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರ ಹೊರವಲಯದ ಕಸ್ತೂರಬಾ ಗಾಂಧಿ ಸ್ಮಾರಕ ಆಶ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಅವರ 152ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಗಾಂಧೀಜಿ ಚಿತಾಭಸ್ಮ ಸಮಾಧಿಗೆ ಪೂಜೆಸಲ್ಲಿಸಿ ಮಾತನಾಡಿದರು.

‘ತಾಲ್ಲೂಕಿನಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಅಂತರ್ಜಲ ಮಟ್ಟ ಸುಧಾರಣೆಯಾಗಬೇಕು. ಗ್ರಾಮ ಸ್ವರಾಜ್‌ಗೆ ಮಹತ್ವ ನೀಡಿದ್ದ ಗಾಂಧೀಜಿ ಕನಸು ನನಸಾಗಲು ಸರ್ಕಾರ ಮುಂದಾಗಬೇಕು. ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ದೊಡ್ಡಮಟ್ಟದ ಹೋರಾಟವೇ ನಡೆಯುವ ಸಾಧ್ಯತೆ ಇದೆ’ ಎಂದರು.

ADVERTISEMENT

ಇಂದಿನ ದಿನಗಳಲ್ಲಿ ರಾಜಕಾರಣ ತನ್ನ ಪಾವಿತ್ರ್ಯತೆ ಮತ್ತು ಪಕ್ವತೆಯನ್ನು ಕಳೆದುಕೊಳ್ಳುತ್ತಿದೆ. ಗಾಂಧೀಜಿ ಚಿತಾಭಸ್ಮ ಸಮಾಧಿ ಸ್ಥಳವನ್ನುಉತ್ತಮ ಪ್ರವಾಸಿ ತಾಣವಾಗಿ ರೂಪಿಸಬೇಕು ಎಂದು ತಿಳಿಸಿದರು.

ಶಿಕ್ಷಕರ ವರ್ಗ ಹಾಗೂ ಕಸ್ತೂರಬಾ ಗಾಂಧಿ ಸ್ಮಾರಕ ಆಶ್ರಮದ ವಿದ್ಯಾರ್ಥಿಗಳು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿ.ವಿ.ಟಿ. ಬಸವರಾಜ್, ನಗರಸಭೆ ಅಧ್ಯಕ್ಷ ಗಿರೀಶ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್.ಡಿ. ಪ್ರಸಾದ್, ತಹಶೀಲ್ದಾರ್ ಸಂತೋಷ್ ಕುಮಾರ್, ತಾ.ಪಂ.ತಿ ಇಒ ನಟರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ನಗರಸಭೆ ಪೌರಾಯುಕ್ತ ರಾಜಶೇಖರ್, ಕಸ್ತೂರಬಾ ಗಾಂಧಿ ಸ್ಮಾರಕ ಆಶ್ರಮದ ಮುಖ್ಯಸ್ಥೆ ಉಷಾ ಅಬ್ರೌಲ್, ಸದಸ್ಯ ಅನಂತ ಕುಮಾರ್, ರೈಲ್ವೆ ಮಹದೇವ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದರಾಜ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ನಾರಾಯಣಪ್ಪ, ಅನಂತ ಇಂಟರ್ ನ್ಯಾಷನಲ್ ಇಂಗ್ಲಿಷ್ ಶಾಲೆಯ ಶಿಕ್ಷಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.