
ಕೊಣನೂರು: ‘ಮಕ್ಕಳಿಗೆ ಕೇಳುವುದಕ್ಕಿಂತ ಮೊದಲೇ ವಿವಿಧ ವಸ್ತುಗಳನ್ನು ಕೊಡಿಸುವ ಪೋಷಕರು ಅವರಲ್ಲಿ ಜವಾಬ್ದಾರಿ ಮತ್ತು ವಸ್ತುಗಳ ಬೆಲೆ ಅರಿಯಲು ಅವಕಾಶ ಮಾಡಿಕೊಡುವಲ್ಲಿ ವಿಫಲರಾಗುತ್ತಿದ್ದಾರೆ’ ಎಂದು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷೆ ಹೆಚ್.ಎಲ್.ರಾಜೇಶ್ವರಿ ತಿಳಿಸಿದರು.
ಪಟ್ಟಣದ ಎಂಕೆಎಸ್ ಲಯನ್ಸ್ ವಿದ್ಯಾನಿಕೇತನ ಶಾಲೆಯಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತಾನಾಡಿದರು. ಕೋವಿಡ್ ಸಮಯದಲ್ಲಿ ಶಾಲಾ ವಿದ್ಯಾರ್ಥಿಗಳ ಕೈಸೇರಿದ ಮೊಬೈಲ್ ಫೋನ್ ಈಗ ಮಕ್ಕಳಿಗೆ ಅನಗತ್ಯ ವಿಷಯಗಳನ್ನು ಕಲಿಸುತ್ತಿರುವುದು ಅಘಾತಕಾರಿ ವಿಷಯ. ಪೋಷಕರು ಮಕ್ಕಳ ಚಟುವಟಿಕೆಯನ್ನು ಗಮನಿಸುವುದು ಅತ್ಯಗತ್ಯ’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ನಾಗರಾಜು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಇಂಗ್ಲಷ್ ಶಿಕ್ಷಣ ನೀಡುತ್ತಿರುವ ಲಯನ್ಸ್ ಶಾಲೆ ಅನೇಕರಿಗೆ ವೈದ್ಯರು ಮತ್ತು ಎಂಜಿನಿಯರ್ , ಪ್ರತಿಷ್ಠಿತ ವೃತ್ತಿ ಗಳಿಸಲು ಅವಕಾಶ ಮಾಡಿದೆ ಎಂದರು.
ಲಯನ್ಸ್ ಕ್ಲಬ್ ಅದ್ಯಕ್ಷ ಕೆ.ಎ.ಶ್ರೀಧರ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಅಬೂಬಕರ್, ಕಾರ್ಯದರ್ಶಿ ರವಿಕಮಾರ್, ಖಜಾಂಚಿ ಸುಬ್ರಹ್ಮಣ್ಯ, ಪಂಚಾಯಿತಿ ಉಪಾಧ್ಯಕ್ಷೆ ಪಾವನಾ ಸತೀಶ್ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ಮತ್ತು ಮೌಲ್ಯಗಳನ್ನು ತಿಳಿಸಬೇಕು ಎಂದು ಪೋಷಕರಲ್ಲಿ ಮನವಿಮಾಡಿದರು.
ಕ್ರೀಡಾ, ಸಾಹಿತ್ಯಕ ಮತ್ತು ಪಠ್ಯ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು.
ವಿದ್ಯಾರ್ಥಿಗಳು ನೃತ್ಯ, ಐತಿಹಾಸಿಕ, ಸಾಂಸ್ಕ್ರತಿಕ ಕಾರ್ಯಕ್ರಮ ಪ್ರದರ್ಶಿಸಿದರು. ಲಿಯೋ ಕ್ಷಬ್ ಅದ್ಯಕ್ಷೆ ಲಹರಿ, ಶಾಲಾ ಆಡಳಿತ ಮಂಡಳಿ, ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಶಿಕ್ಷಕಿಯರು, ಪೋಷಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.