
ಹಾಸನ: ದಲಿತ ಸಾಹಿತ್ಯ ಪರಿಷತ್ ಗೆ ಸುಮಾರು 500 ವರ್ಷಗಳ ಇತಿಹಾಸ ಇದ್ದರೂ ಸಂಘಟನಾತ್ಮಕವಾಗಿ ಹಿಂದೆ ಉಳಿದಿದೆ ಎಂದು ಹಿರಿಯ ಸಾಹಿತಿ ಹಾಗೂ ಸಾಮಾಜಿಕ ಚಿಂತಕ ಗುರುಮೂರ್ತಿ ಬೇಸರ ವ್ಯಕ್ತಪಡಿಸಿದ್ದರು.
ನಗರದ ಸ್ವಾಭಿಮಾನಿ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ ರಾಜ್ಯ ಹಾಗೂ ಜಿಲ್ಲಾ ಘಟಕದ ವತಿಯಿಂದ ಭಾನುವಾರ ನಡೆದ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಉದ್ಘಾಟಿಸಿ ಅವರು ಮಾತನಾಡಿದರು. ‘ಸಾಹಿತ್ಯ ಆತ್ಮಕವಾಗಿ ದಲಿತರ ಬದುಕು ಭಾವನೆಗಳನ್ನು ಬರವಣಿಗೆ ಮೂಲಕ ಸಮಾಜಕ್ಕೆ ತಿಳಿಸುವ ಸಲುವಾಗಿ ರೂಪಗೊಂಡ ದಲಿತ ಸಾಹಿತ್ಯ ಪರಿಷತ್ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಹರಸಾಹಸ ಪಡುವಂತಾಗಿದೆ. ಇದಕ್ಕೆ ಶಕ್ತಿ ತುಂಬಲು ಸಂಘಟನೆ ಬಹಳ ಮುಖ್ಯ’ ಎಂದರು.
‘ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಸಮುದಾಯ ಇದ್ದರು, ಇದುವರೆಗೂ ರಾಜಕೀಯವಾಗಿ ಹಾಗೂ ಯಾವುದೇ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಾಗಿಲ್ಲ ಇದಕ್ಕೆ ಸಂಘಟನಾತ್ಮಕವಾಗಿ ಹಿಂದೆ ಉಳಿದಿರುವುದೇ ಕಾರಣ’ ಎಂದರು.
‘ಜಿಲ್ಲೆಯಲ್ಲಿ ದಲಿತ ಸಾಹಿತ್ಯ ಪರಿಷತ್ ಜವಾಬ್ದಾರಿಯನ್ನು ಒಬ್ಬ ಮಹಿಳೆ ಹೆಗಲಿಗೆ ಹಾಕಿದ್ದು ಅವರಿಗೆ ಬೆಂಬಲವಾಗಿ ಎಲ್ಲರೂ ನಿಲ್ಲುವ ಮೂಲಕ ಸಹಕಾರ ನೀಡುವ ಅಗತ್ಯವಿದೆ. ದಲಿತ ಸಾಹಿತ್ಯ ಪರಿಷತ್ ಅನ್ನು ಇನ್ನಷ್ಟು ಗಟ್ಟಿಗೊಳಿಸುವ ಸಲುವಾಗಿ ಎಲ್ಲರೂ ಒಂದಾಗಬೇಕಿದೆ’ ಎಂದರು
ಕಾರ್ಯಕ್ರಮದಲ್ಲಿ ಪರಿಷತ್ ಅಧ್ಯಕ್ಷೆ ಡಾ.ಸುಮಲತಾ, ಐಚನಹಳ್ಳಿ ಕೃಷ್ಣಪ್ಪ, ಕೃಷ್ಣದಾಸ್, ಚಂದ್ರಗುಪ್ತ , ಈರೇಶ್ ಹಿರೇಹಳ್ಳಿ, ಎಂ.ಕೆ.ಕೃಷ್ಣಯ್ಯ , ಶಿಕ್ಷಕಿ ಶಾಂತಮ್ಮ, ಬ್ಯಾಕರವಳ್ಳಿ ವೆಂಕಟೇಶ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.