ADVERTISEMENT

ಹಿರೀಸಾವೆ | ಶೀಘ್ರವೇ ದೊಡ್ಡ ಕೆರೆ ಏರಿ ದುರಸ್ತಿ: ಶಾಸಕ ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 14 ಮೇ 2025, 14:23 IST
Last Updated 14 ಮೇ 2025, 14:23 IST
ಹಿರೀಸಾವೆ ಡಿಸಿಸಿ ಬ್ಯಾಂಕ್ ಬಳಿ ಎಸ್ಎಚ್ 8ರ ಸೇತುವೆ ನಿರ್ಮಾಣದ ಕಾಮಗಾರಿಯನ್ನು ಶಾಸಕ ಬಾಲಕೃಷ್ಣ ಬುಧವಾರ ಪರಿಶೀಲಿಸಿದರು. ಜೆಡಿಎಸ್ ಮುಖಂಡರು ಭಾಗವಹಿಸಿದ್ದರು
ಹಿರೀಸಾವೆ ಡಿಸಿಸಿ ಬ್ಯಾಂಕ್ ಬಳಿ ಎಸ್ಎಚ್ 8ರ ಸೇತುವೆ ನಿರ್ಮಾಣದ ಕಾಮಗಾರಿಯನ್ನು ಶಾಸಕ ಬಾಲಕೃಷ್ಣ ಬುಧವಾರ ಪರಿಶೀಲಿಸಿದರು. ಜೆಡಿಎಸ್ ಮುಖಂಡರು ಭಾಗವಹಿಸಿದ್ದರು   

ಹಿರೀಸಾವೆ: ಇಲ್ಲಿನ ದೊಡ್ಡ ಕೆರೆ ಏರಿಯ ದುರಸ್ತಿ ಕಾಮಗಾರಿಯನ್ನು ತುರ್ತಾಗಿ ಮಾಡಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಬುಧವಾರ ಹಿರೀಸಾವೆಯಲ್ಲಿ ಹೇಳಿದರು.

ಇಲ್ಲಿನ ರಾಜ್ಯ ಹೆದ್ದಾರಿ 8ರ ಡಿಸಿಸಿ ಬ್ಯಾಂಕ್ ಬಳಿ ನಿರ್ಮಾಣ ಮಾಡುತ್ತಿರುವ ಸೇತುವೆ ಕಾಮಗಾರಿಯನ್ನು ಪರಿಶೀಲನೆ ಮಾಡಿ, ಅವರು ಮಾತನಾಡಿದರು. ಸಣ್ಣ ನೀರಾವರಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಕೆಲಸ ಮಾಡಲಾಗುವುದು. ದುರಸ್ತಿ ಕಾರ್ಯಕ್ಕೆ ಗ್ರಾಮಸ್ಥರು ಹೆಚ್ಚಿನ ಸಹಕಾರ ನೀಡಬೇಕು ಎಂದರು. ಸೇತುವೆ ನಿರ್ಮಾಣ ಮಾಡುವಾಗ, ಅಕ್ಕಪಕ್ಕದ ಚರಂಡಿ ನೀರು ರಾಜಕಾಲುವೆಗೆ ಸರಾಗವಾಗಿ ಹರಿಯುವಂತೆ ಅಗತ್ಯ ಇರುವ ಕಡೆ ಪೈಪ್ ಅಳವಡಿಸುವಂತೆ ಸೂಚಿಸಿದರು.

ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಮಂಜಣ್ಣಗೌಡ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ್, ನಿರ್ದೇಶಕ ಬೋರೇಗೌಡ, ಮುಖಂಡರಾದ ರವಿಕುಮಾರ್, ದೇವರಾಜು, ಮಂಜುನಾಥ್, ಕುಮಾರ್, ರೋಡ್ ಮಂಜುನಾಥ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.