ಶಾಂತಿಗ್ರಾಮ ಬಳಿ ರೈಲು ಹಳಿಯ ಮೇಲೆ ಮಣ್ಣು ಕುಸಿದಿರುವುದು
ಹಾಸನ: ಹಾಸನ ಮತ್ತು ಶಾಂತಿಗ್ರಾಮ ನಡುವಿನ ರೈಲು ಮಾರ್ಗದಲ್ಲಿ ಶನಿವಾರ ಬೆಳಿಗ್ಗೆ ಭೂಕುಸಿತ ಉಂಟಾಗಿದ್ದು, ಗೂಡ್ಸ್ ರೈಲಿಗೆ ಸ್ವಲ್ಪ ಹಾನಿಯಾಗಿದೆ.
ಸ್ಥಳದಲ್ಲಿದ್ದ ಟ್ರ್ಯಾಕ್‌ಮೆನ್‌ಗಳು ಮಣ್ಣನ್ನು ತೆರವುಗೊಳಿಸಿದ್ದು, ರೈಲು ಸಂಚಾರ ಆರಂಭಿಸಲಾಗಿದೆ. ಈ ಮಾರ್ಗದಲ್ಲಿ 20 ಕಿ.ಮೀ ವೇಗದಲ್ಲಿ ರೈಲುಗಳನ್ನು ಓಡಿಸಲು ಸೂಚಿಸಲಾಗಿದೆ. ಹೆಚ್ಚಿನ ಕಾರ್ಯಾಚರಣೆಗೆ ಹಾಸನದಿಂದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಬೆಳಿಗ್ಗೆ 7 ಗಂಟೆಗೆ ಹೊರಡಬೇಕಿದ್ದ ಹಾಸನ-ಯಶವಂತಪುರ ರೈಲು 08.30 ಕ್ಕೆ ಹಾಸನದಿಂದ ಹೊರಟಿದೆ.
ಯಡಕುಮೇರಿ–ಕಡಗರವಳ್ಳಿ ಮಾರ್ಗದಲ್ಲಿ ಮಣ್ಣು ಕುಸಿತ: ರೈಲುಗಳ ಸಂಚಾರ ರದ್ದು
ಯಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭೂಕುಸಿತ ಸಂಭವಿಸಿರುವುದರಿಂದ ವಿಜಯಪುರ-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು, ಮಧ್ಯಾಹ್ನ 12 ಗಂಟೆಯ ಬದಲು, ಸಂಜೆ 6.30 ಕ್ಕೆ ವಿಜಯಪುರದಿಂದ ಹೊರಡಲಿದೆ.
ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು, ವಿಜಯಪುರ-ಮಂಗಳೂರು ಸೆಂಟ್ರಲ್ ಸ್ಪೆಷಲ್ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 16585 ಎಸ್ಎಂವಿಟಿ ಬೆಂಗಳೂರು-ಮುರ್ಡೇಶ್ವರ ಎಕ್ಸ್‌ಪ್ರೆಸ್ ರೈಲು ರೈಲು ಜುಲೈ 27ರಂದು ರದ್ದಾಗಿವೆ.
ಎಸ್ಎಂವಿಟಿ ಬೆಂಗಳೂರು-ಕಾರವಾರ ವಿಶೇಷ ಎಕ್ಸ್‌ಪ್ರೆಸ್, ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್, ಕಾರವಾರ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್, ಮುರ್ಡೇಶ್ವರ-ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್, ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ರೈಲು ಜುಲೈ 28ರಂದು ರದ್ದಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.