ಹಾಸನ: ಜಿಲ್ಲೆಯ ಯಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭೂಕುಸಿತ ಸಂಭವಿಸಿದ್ದು, ಶುಕ್ರವಾರ ಬೆಂಗಳೂರು–ಮಂಗಳೂರು ನಡುವಿನ ಒಂದು ರೈಲು ಸಂಚಾರ ರದ್ದಾಗಿದ್ದು, ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಕಾರವಾರ–ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ (ರೈ.ಸಂ. 06568) ಜುಲೈ 26ರಂದು ರದ್ದಾಗಿದೆ.
ಮಂಗಳೂರು ಸೆಂಟ್ರಲ್– ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ (ರೈ.ಸಂ. 07378) ರೈಲು, ಶುಕ್ರವಾರ ಸುಬ್ರಹ್ಮಣ್ಯ ರಸ್ತೆ, ಪಡೀಲ್, ಸುರತ್ಕಲ್, ಕಾರವಾರ, ಮಡಗಾಂವ್, ಕುಲೆಮ್, ಕ್ಯಾಸಲ್ ರಾಕ್, ಲೋಂಡಾ ಮೂಲಕ ಹುಬ್ಬಳ್ಳಿಗೆ ಸಂಚರಿಸಿದೆ.
ಮುರ್ಡೇಶ್ವರ–ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ (ರೈ.ಸಂ. 16586), ಕಣ್ಣೂರು–ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ (ರೈ.ಸಂ. 16512) , ಕಾರವಾರ–ಕೆಎಸ್ಆರ್ ಬೆಂಗಳೂರು ಪಂಚಗಂಗಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (ರೈ.ಸಂ.16596) ರೈಲು ಮಂಗಳೂರು ಜಂಕ್ಷನ್, ಶೋರನೂರು, ಸೇಲಂ, ಜೋಲಾರ್‌ಪೆಟ್ಟಿ ಕ್ಯಾಬಿನ್ ಮೂಲಕ ಸಂಚರಿಸಿದೆ.
ಕೆಎಸ್ಆರ್ ಬೆಂಗಳೂರು–ಕಣ್ಣೂರು ಎಕ್ಸ್‌ಪ್ರೆಸ್ (ರೈ.ಸಂ. 16511), ಎಸ್ಎಂವಿಟಿ ಬೆಂಗಳೂರು–ಮುರ್ಡೇಶ್ವರ ಎಕ್ಸ್‌ಪ್ರೆಸ್ (ರೈ.ಸಂ. 16585) ರೈಲು, ಕೆಎಸ್ಆರ್ ಬೆಂಗಳೂರು–ಕಾರವಾರ ಪಂಚಗಂಗಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (ರೈ.ಸಂ. 16595) ರೈಲು ಬೆಂಗಳೂರು, ಜೋಲಾರಪೆಟ್ಟಿ ಕ್ಯಾಬಿನ್, ಶೋರನೂರು, ಮಂಗಳೂರು ಜಂಕ್ಷನ್ ಮೂಲಕ ಸಂಚರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.