ಸಕಲೇಶಪುರ ತಾಲ್ಲೂಕಿನ ಯಡಕಮೇರಿ- ಕಡಗರಹಳ್ಳಿ ನಿಲ್ದಾಣಗಳ ನಡುವೆ ರೈಲ್ವೆ ಹಳಿಯ ಕೆಳಗೆ ಭೂ ಕುಸಿತ
ಹಾಸನ: ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಡಕಮೇರಿ- ಕಡಗರಹಳ್ಳಿ ನಿಲ್ದಾಣಗಳ ನಡುವೆ ರೈಲ್ವೆ ಹಳಿಯ ಕೆಳಗೆ ಭೂ ಕುಸಿತವಾಗಿದೆ. ಈ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಮಾರ್ಗದ ಎಲ್ಲಾ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ಹಾಸನ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರದಿಂದಾಗಿ ಸಕಲೇಶಪುರ ತಾಲ್ಲೂಕಿನ ಯಡಕಮೇರಿ-ಕಡಗರಹಳ್ಳಿ ರೈಲು ನಿಲ್ದಾಣಗಳ ನಡುವೆ ಹಳಿಯ ಕೆಳಗೆ ಭೂ ಕುಸಿತವಾಗಿದೆ. ಈ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
ಶುಕ್ರವಾರ ರಾತ್ರಿ ಈ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿದ್ದು, ಮಾರ್ಗದ ಎಲ್ಲಾ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ಸುರಿಯುವ ಮಳೆಯ ನಡುವೆಯೇ ಭೂ ಕುಸಿತ ಉಂಟಾಗಿರುವ ಪ್ರದೇಶದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಮೈಸೂರು ವಿಭಾಗದ ಡಿಆರ್‌ಎಂ ಶಿಲ್ಪಾ ಅಗರ್‌ವಾಲ್ ಸೇರಿದಂತೆ ಅಧಿಕಾರಿಗಳು, ಭೂ ಕುಸಿತ ಉಂಟಾಗಿರುವ ಪ್ರದೇಶದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ವೀಕ್ಷಣೆ ಮಾಡಿದರು. ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದರು.
ಸುಮಾರು 500 ಮೀಟರ್ ಆಳಕ್ಕೆ ಭೂ ಕುಸಿತ ಉಂಟಾಗಿದೆ. ಗೂಡ್ಸ್ ರೈಲಿನಲ್ಲಿ ಕಲ್ಲುಗಳನ್ನು ತಂದು ಸ್ಥಳದಲ್ಲಿ ಹಾಕಲಾಗಿದ್ದು, ಹಳಿಯ ಕೆಳಗೆ ಮಣ್ಣು ಕುಸಿಯದಂತೆ ಕಾಮಗಾರಿ ಕೈಗೊಳ್ಳಲಾಗಿದೆ.
ಈ ಕಾರ್ಯಾಚರಣೆ ಕ್ಲಿಷ್ಟಕರವಾಗಿದೆ. ಸುಮಾರು 5 ದಿನಗಳ ಕಾಲ ಕಾರ್ಯಾಚರಣೆ ನಡೆಸಬೇಕಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು-ಮಂಗಳೂರು ಸೇರಿ, ಈ ಮಾರ್ಗದ ಎಲ್ಲಾ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಮಳೆಯ ನಡುವೆಯೂ ದುರಸ್ತಿ ಕಾಮಗಾರಿ ಚುರುಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.