ADVERTISEMENT

ಕಾಮಸಮುದ್ರ ಗೇಟ್‌ ಬಳಿ ಚಿರತೆ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 4:55 IST
Last Updated 8 ಅಕ್ಟೋಬರ್ 2025, 4:55 IST
ವಿದ್ಯಾಧರ್
ವಿದ್ಯಾಧರ್   

ಅರಸೀಕೆರೆ: ಇಲ್ಲಿನ ಜೆಸಿ ಪುರ–ರಾಮನಹಳ್ಳಿ ಮಾರ್ಗದಿಂದ ಅರಸೀಕೆರೆಯತ್ತ ಬರುವ ರಸ್ತೆಯ ಎಂಟನೇ ಮೈಲಿ ಕಾಮಸಮುದ್ರ ಗೇಟ್ ಬಳಿ ಗುರುವಾರ ರಾತ್ರಿ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಈ ಮಾರ್ಗದಲ್ಲಿ ಚಿರತೆ, ಕರಡಿಗಳಿಂದ ಜನರಿಗೆ ಸಮಸ್ಯೆ ಹೆಚ್ಚಾಗುತ್ತಿದ್ದು, ಅರಣ್ಯ ಇಲಾಖೆ ತಾತ್ಕಾಲಿಕ ಕ್ರಮಗಳನ್ನು ಮಾತ್ರ ಅನುಸರಿಸುತ್ತಿದೆ. ರಾತ್ರಿ ವೇಳೆ ಗ್ರಾಮಸ್ಥರು ಸಂಚರಿವುದು ಕಷ್ಟವಾಗಿದೆ ಎಂದು ಗ್ರಾಮಸ್ಥರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಗರುಡನಗಿರಿಯಿಂದ ಕಾಡು ಪ್ರಾಣಿಗಳನ್ನು ಸೆರೆ ಹಿಡಿದು ತಿರುಪತಿಗೆ ಬಿಡುತ್ತಾರೆ, ಕೆಂಗಲ್ ಸಿದ್ದೇಶ್ವರದಿಂದ ಹಿಡಿದು ನಾಗಪುರಿ ಅರಣ್ಯಕ್ಕೆ ಬಿಡುತ್ತಾರೆ ಇವೆಲ್ಲವೂ ಕೇವಲ ಬಿಲ್ ಮಾಡಿಕೊಳ್ಳಲು ಮತ್ತು ಹಣ ಗಳಿಸಲು ಮಾತ್ರ’ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT


ಶಾಶ್ವತ ಪರಿಹಾರ ಕಲ್ಪಿಸಿ:

‘ಪ್ರತಿ ಬಾರಿಯೂ ಚಿರತೆ ಅಥವಾ ಕರಡಿ ಸೆರೆ ಸಿಕ್ಕಾಗ ಬೇರೆ ಅರಣ್ಯ ಪ್ರದೇಶಗಳಿಗೆ ಬಿಟ್ಟುಬರುವುದು ತಾತ್ಕಾಲಿಕ ಕ್ರಮ ಮಾತ್ರ. ಇದರಿಂದ ಸಮಸ್ಯೆ ಮೂಲದಿಂದ ಪರಿಹಾರವಾಗುವುದಿಲ್ಲ. ಪ್ರಾಣಿಗಳು ಮತ್ತೆ ಗ್ರಾಮಗಳಿಗೆ ನುಗ್ಗುತ್ತವೆ, ಇದರಿಂದ ಗ್ರಾಮಸ್ಥರ ಜೀವಕ್ಕೆ ಅಪಾಯ ಹೆಚ್ಚು. ರಾಮನಹಳ್ಳಿ ಅಥವಾ ನಾಗಪುರಿಯ ನಡುವಿನ ಪ್ರದೇಶದಲ್ಲಿ ಶಾಶ್ವತ ಸಂರಕ್ಷಣಾ ಮೃಗಾಲಯವನ್ನು ಸ್ಥಾಪಿಸಬೇಕು. ಚಿರತೆ, ಕರಡಿಗಳನ್ನು ಅಲ್ಲಿಯೇ ಉಳಿಸಿ ನೋಡಿಕೊಳ್ಳುವ ವ್ಯವಸ್ಥೆ ಮಾಡಿದರೆ ಒಂದು ಕಡೆ ಗ್ರಾಮಸ್ಥರಿಗೆ ಭದ್ರತೆ ಸಿಗುತ್ತದೆ’ ಎಂದು ಮಾಜಿ ಕೌನ್ಸಿಲರ್ ವಿಧ್ಯಾದರ್ ತಿಳಿಸಿದ್ದಾರೆ.

ಅಲ್ಲದೇ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುತ್ತದೆ. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತವೆ, ಸರ್ಕಾರ ಶೀಘ್ರ ಕ್ರಮ ಕೈಗೊಳ್ಳದಿದ್ದರೆ, ಪ್ರಾಣಿಗಳು ಮತ್ತೆ ನಗರ ಹಾಗೂ ಗ್ರಾಮಗಳಿಗೆ ನುಗ್ಗಿ ಪ್ರಾಣಿ–ಮನುಷ್ಯರ ಮಧ್ಯೆ ಸಂಘರ್ಷಗಳು ನಡೆಯುವ ಸಾಧ್ಯತೆ ಹೆಚ್ಚಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.