ADVERTISEMENT

ಹಳೇಬೀಡು ಸುತ್ತಮುತ್ತ ಲಘು ಭೂಕಂಪದ ಅನುಭವ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 15:11 IST
Last Updated 17 ಸೆಪ್ಟೆಂಬರ್ 2021, 15:11 IST

ಹಳೇಬೀಡು: ಅಡಗೂರು, ಗಂಗೂರು ಹಾಗೂ ಲಿಂಗಪ್ಪನಕೊಪ್ಪಲು ಸುತ್ತಮುತ್ತ ಶುಕ್ರವಾರ ಸಂಜೆ
5.20ರಲ್ಲಿ ಜನರಿಗೆ ಲಘು ಭೂಕಂಪ ಸಂಭವಿಸಿದ ಅನುಭವ ಆಗಿದೆ.

ದ್ಯಾವಪ್ಪನಹಳ್ಳಿ, ಚಟಚಟ್ಟಿಹಳ್ಳಿ, ಕೆಂಪಗೊಡನಹಳ್ಳಿ, ತಿರುಮಲನಹಳ್ಳಿ ಮೊದಲಾದ ಗ್ರಾಮದ ಜನರು ಭಯದಿಂದ ಮನೆ ಹೊರಗೆ ಬಂದರು.ಗ್ರಾಮಗಳಿಗೆ ಸಬ್ ಇನ್‌ಸ್ಪೆಕ್ಟರ್‌ ಗಿರಿಧರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಜೋರು ಶಬ್ದದೊಂದಿಗೆ ಭೂಮಿ ನಡುಗಿದಂತಾಯಿತು. ಮನೆಗಳಲ್ಲಿ ಪಾತ್ರೆಗಳು ಅಲುಗಾಡಿವೆ’ ಎಂದು ಲಿಂಗಪ್ಪನಕೊಪ್ಪಲು ಗ್ರಾಮದ ಎಲ್.ಈ.ಶಿವಪ್ಪ ತಿಳಿಸಿದರು.

ADVERTISEMENT

‘ಹಳೇಬೀಡು ಹೋಬಳಿಯ ಹಲವು ಗ್ರಾಮದಿಂದ ಲಘು ಭೂಕಂಪದ ಅನುಭವ ಆಗಿರುವ ಮಾಹಿತಿ ಬಂದಿದೆ. ಈ ಕುರಿತು ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ಕಂಪನ ಮಾಪನದಮಾಹಿತಿ ಕೇಳಲಾಗಿದೆ’ ಎಂದು ತಹಶೀಲ್ದಾರ್ ಮೋಹನ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.