ಬೇಲೂರು: ಪುಸ್ತಕದ ಅಂಗಡಿಗಳಿಗಿಂತ ಮಧ್ಯದ ಅಂಗಡಿಗಳು ಹೆಚ್ಚಾಗುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಲೇಖಕಿ ಶೈಲಜಾ ಹಾಸನ ಹೇಳಿದರು.
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಈಚೆಗೆ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ, ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳು ಕಂಪ್ಯೂಟರ್, ಮೊಬೈಲ್‌ಗಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದು, ಪುಸ್ತಕ ಓದುವ ಹವ್ಯಾಸ ಕಡಿಮೆ ಇರುತ್ತದೆ. ಪೋಷಕರು ಮಕ್ಕಳಿಗೆ ಓದಲು ಪ್ರೇರೆಪಿಸಬೇಕು. ಪೋಷಕರೂ ಓದುವ ಅಭ್ಯಾಸ ಬೆಳೆಸಿಕೊಳ್ಳಲು ಮುಂದಾಗಬೇಕು ಎಂದರು.
ಸಾಹಿತಿ ಅವರೇಕಾಡು ವಿಜಯಕುಮಾರ್ ಮಾತನಾಡಿ, ಬರವಣಿಗೆ ಸುಲಭದ ಮಾತಲ್ಲ ಕಾವ್ಯಕ್ಕೆ ತನ್ನದೇ ಅದ ಶಕ್ತಿ ಮತ್ತು ಸ್ವಂತಿಕೆ ಇದೆ ಎಂದರು.
ಮಧುಮಾಲತಿ ರುದ್ರೇಶ್ ಅವರ ‘ಸ್ವಾತಿ ಹನಿ ಪ್ರೀತಿಮುತ್ತಾದಂತೆ’ ಹಾಗೂ ಶಶಿ ಎಂ.ಟಿ.ಮಂಡಲಮನೆ ಅವರ ‘ಬೆಳ್ಳಿ ಬೆಳಕು’ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.
ಶಿಕ್ಷಕ ಟಿ.ಡಿ.ತಮ್ಮಣ್ಣಗೌಡ, ಸಂಶೋಧಕ ಶಿವತ್ಸ ಎಸ್. ವಟಿ, ಲೇಖಕಿ ಇಂದಿರಮ್ಮ, ಪ್ರಾಂಶುಪಾಲ ಎಸ್.ಗಣೇಶ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಬಿ.ಎಲ್.ರಾಜೇಗೌಡ, ಮಾ.ನ.ಮಂಜೇಗೌಡ , ಮಾ.ಶಿವಮೂರ್ತಿ, ಬಿ.ಬಿ.ಶಿವರಾಜು, ಆರ್.ಎಸ್.ಮಹೇಶ್,ಬೊಮ್ಮಡಿಹಳ್ಳಿ ಕುಮಾರಸ್ವಾಮಿ, ಕವಯತ್ರಿ ಮಧುಮಾಲತಿ ರುದ್ರೇಶ್, ಶಶಿ ಎಂ.ಟಿ. ಮಂಡಲಮನೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.