ADVERTISEMENT

ಭೀಮ್ ಆರ್ಮಿ ಸಂಘದಿಂದ ಮಹಿಷ ದಸರಾ ಆಚರಣೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 16:34 IST
Last Updated 9 ಅಕ್ಟೋಬರ್ 2021, 16:34 IST
ಹಾಸನದಲ್ಲಿ ಭೀಮ್‌ ಆರ್ಮಿ ಸಂಘಟನೆ ವತಿಯಿಂದ ಮಹಿಷ ದಸರಾ ಆಚರಿಸಿ, ಭಾವಚಿತ್ರದ ಮೆರವಣಿಗೆ ಮಾಡಲಾಯಿತು
ಹಾಸನದಲ್ಲಿ ಭೀಮ್‌ ಆರ್ಮಿ ಸಂಘಟನೆ ವತಿಯಿಂದ ಮಹಿಷ ದಸರಾ ಆಚರಿಸಿ, ಭಾವಚಿತ್ರದ ಮೆರವಣಿಗೆ ಮಾಡಲಾಯಿತು   

ಹಾಸನ: ಭೀಮ್ ಆರ್ಮಿ ಸಂಘಟನೆಯ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮಹಿಷಾಸುರ ಹಾಗೂ
ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಮಾಡುವ ಮೂಲಕ ‘ಮೂಲ ನಿವಾಸಿ ಮಹಿಷಾಸುರ
ದಸರೆ’ ಆಚರಣೆ ಮಾಡಲಾಯಿತು.

ಹಾಸನ ಸಿದ್ದಯ್ಯ ನಗರದಿಂದ ಹೊರಟ ಮೆರವಣಿಗೆ ಬಿ.ಎಂ. ರಸ್ತೆ, ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆ
ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಯುವಕರು, ಮಕ್ಕಳು ಕುಣಿದು
ಕುಪ್ಪಳಿಸಿದರು.

ಭೀಮ್ ಆರ್ಮಿ ಜಿಲ್ಲಾ ಅಧ್ಯಕ್ಷ ಎಚ್.ಎಸ್. ಪ್ರದೀಪ್ ಮಾತನಾಡಿ, ‘ಮಹಿಷಾಸುರನನ್ನು ಕೆಟ್ಟವನಾಗಿ
ಬಿಂಬಿಸಲಾಗಿದೆ. ಆದರೆ, ಆತ ಕೆಟ್ಟವನಲ್ಲ, ಉತ್ತಮ ಆಡಳಿತಗಾರ ನಾಗಿದ್ದ. ಮೂಲ ನಿವಾಸಿಗಳ ದೊರೆ ಮಹಿಷಾಸುರ. ಮಹಿಷ ಮಂಡಲ ವಾಗಿದ್ದ ಮೈಸೂರಿಗೆ ಮಹಿಷಾ ಸುರನಿಂದಾಗಿ ಮೈಸೂರು ಎಂಬ ಹೆಸರು ಬಂದಿದೆ. ಹಾಗಾಗಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಮಹಿಷಾಸುರ ದಸರೆ ಆಚರಣೆ ಮಾಡಲಾಗುತ್ತಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.