
ನುಗ್ಗೇಹಳ್ಳಿ: ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ವಿರೋಧಿಸಿ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಅವರೊಂದಿಗೆ ನಾವಿದ್ದೇವೆ ಎಂದು ಸಾರಲು ಬೆಂಗಳೂರಿನಿಂದ ಧರ್ಮಸ್ಥಳದವರೆಗೆ ಪಾದಯಾತ್ರೆ ನಡೆಯುತ್ತಿದೆ ಎಂದು ಅಂಕಣಕಾರ ಹಾಗೂ ರಾಷ್ಟ್ರೀಯ ಚಿಂತಕ ತನ್ವೀರ್ ಅಹಮ್ಮದ್ ಉಲ್ಲಾ ಹೇಳಿದರು.
ಹೋಬಳಿಯ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಗೌಡಗೆರೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ನ. 18ರಂದು ಧರ್ಮಸ್ಥಳದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಸಮ್ಮೇಳನದಲ್ಲಿ ಭಾಗಿಯಾಗುತ್ತಿದ್ದು ಇದು ನನ್ನ ಜೀವನದ ಅತ್ಯಂತ ಸುಂದರ ಕ್ಷಣವಾಗಿದೆ ಎಂದರು.
‘ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಟಿರುವ ಪಾದಯಾತ್ರೆಯಲ್ಲಿ ರೈತಾಪಿ ವರ್ಗ ಸೇರಿದಂತೆ ಎಲ್ಲರೊಂದಿಗೂ ಅವರ ಕಷ್ಟ ಸುಖಗಳನ್ನು ಆಲಿಸುವುದರ ಜೊತೆಗೆ ಧರ್ಮಸ್ಥಳದಿಂದ ಸಮಾಜಕ್ಕೆ ಒಳಿತಾಗುತ್ತಿರುವ ಬಗ್ಗೆ ಜನರಿಂದ ತಿಳಿದುಕೊಂಡಿದ್ದೇನೆ. ಗ್ರಾಮಾಭಿವೃದ್ಧಿ ಯೋಜನೆ ಲಕ್ಷಾಂತರ ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದರು.
‘ಪಾದಯಾತ್ರೆಗೆ ಸುಮಾರು 50 ಜನಕ್ಕೂ ಹೆಚ್ಚು ಜನ ಪಾದಯಾತ್ರೆಯಲ್ಲಿ ಸ್ವಯಂ ಪ್ರೇರಿತವಾಗಿ ಪಾಲ್ಗೊಂಡಿದ್ದು ಧರ್ಮಸ್ಥಳಕ್ಕೆ ಹೋಗುವವರೆಗೂ ಸುಮಾರು 500ಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ‘ ಎಂದರು.
ಸಾವಯವ ಕೃಷಿಕ ಬೆಕ್ಕ ರಾಘವೇಂದ್ರ, ಆರ್ ಪಿ ಎಸ್ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ರಾಕೇಶ್ ಜೈನ್, ಕಿಶೋರ್, ಪ್ರಮುಖರಾದ ತಿಮ್ಮಯ್ಯ, ಶ್ಯಾಮ್ ಕಿಂಗ್, ಕವಿಶಾ ಗುಪ್ತ, ಗ್ರಾಮಸ್ಥರಾದ ಶಂಕರ್, ಗೌರಮ್ಮ, ಅನುಷಾ, ರಾಣಿ, ಹೇಮಲತಾ, ಭಾಗ್ಯ, ರಮ್ಯಾ, ಸುನಿತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.