ADVERTISEMENT

ಹೃದಯ ವೈಫಲ್ಯಕ್ಕೆ ಸ್ಪರ್ಶ ಆಸ್ಪತ್ರೆಯಲ್ಲಿ ಆಧುನಿಕ ಚಿಕಿತ್ಸೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 14:22 IST
Last Updated 19 ಆಗಸ್ಟ್ 2024, 14:22 IST
ಡಾ.ಮದಕರಿ ನಾಯಕ
ಡಾ.ಮದಕರಿ ನಾಯಕ   

ಹಾಸನ: ಹೃದಯ ವೈಫಲ್ಯ ಹಾಗೂ ಹೃದಯ ಬಡಿತದ ಏರುಪೇರಿನಿಂದ ಬಳಲುತ್ತಿದ್ದ ನಗರದ 70 ವರ್ಷದ ವ್ಯಕ್ತಿಗೆ ನೂತನ ಚಿಕಿತ್ಸಾ ವಿಧಾನವಾದ ಕಾರ್ಡಿಯಾಕ್ ರಿಸಿಂಕ್ರನೈಸೇಶನ್ ಥೆರಪಿ ಮತ್ತು ಡಿಫಿಬ್ರಿಲೇಟರ್ ಶಸ್ತ್ರಚಿಕಿತ್ಸೆಯನ್ನು ಇಲ್ಲಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞ ಡಾ.ಮದಕರಿ ನಾಯಕ ಹಾಗೂ ಅವರ ತಂಡ ಯಶಸ್ವಿಯಾಗಿ ಮಾಡಿದೆ.

ಕೆಲವು ವರ್ಷಗಳಿಂದ ಈ 70 ವರ್ಷದ ವ್ಯಕ್ತಿ ಡೈಲೇಟೆಡ್ ಕಾರ್ಡಿಯೋಮೈಯೋಪಥಿ ಹಾಗೂ ಹೃದಯ ದೌರ್ಬಲ್ಯದಿಂದ ಬಳಲುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಹೃದಯ ವೈಫಲ್ಯ ಹಾಗೂ ಹೃದಯದ ಎದೆ ಬಡಿತದ ಏರುಪೇರಿನಿಂದ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ರೀತಿಯ ಹೃದಯ ಕಾಯಿಲೆಗೆ ನೂತನ ಚಿಕಿತ್ಸಾ ವಿಧಾನವಾದ ಕಾರ್ಡಿಯಾಕ್ ರಿಸಿಂಕ್ರನೈಸೇಶನ್ ಥೆರಪಿ ಮತ್ತು ಡಿಫಿಬ್ರಿಲೇಟರ್ ಶಸ್ತ್ರಚಿಕಿತ್ಸೆಯು, ರೋಗಿಯಲ್ಲಿ ಹೃದಯ ವೈಫಲ್ಯ ಹಾಗೂ ಸಾವಿನ ದವಡೆಯಿಂದ ಪಾರಾಗಲು ಸಹಾಯಕಾರಿಯಾಗಿದೆ ಡಾ.ಮದಕರಿ ನಾಯಕ ತಿಳಿಸಿದ್ದಾರೆ.

ಈ ನೂತನ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ಬ್ಯಾಟರಿ ಹಾಗೂ ವಿದ್ಯುತ್ ತಂತಿ (ಪೇಸ್ ಮೇಕರ್ ಲೀಡ್ಸ್)ಗಳನ್ನು ಅಪಧಮನಿ ಮೂಲಕ ಹೃದಯದ ಬಲಗಡೆಯ ಕೋಣೆಗೆ ಅಳವಡಿಸಲಾಗುತ್ತದೆ. ಇದರಿಂದ ಹೃದಯದ ಬಡಿತವನ್ನು ಕೃತಕವಾಗಿ ಹಾಗೂ ನಿಖರವಾಗಿ ನಿಯಂತ್ರಿಸುವಲ್ಲಿ ಸಹಾಯವಾಗುತ್ತದೆ. ಹೃದಯದ ಎದೆಬಡಿತದ ಏರುಪೇರು ಆದ ಸಮಯದಲ್ಲಿ ಅಳವಡಿಸಲಾದ ಪೇಸ್ ಮೇಕರ್ ಸ್ವತಃ ಪತ್ತೆ ಹಚ್ಚಿ ಹೃದಯವನ್ನು ಮರುಸ್ಥಿತಿಗೆ ಕೊಂಡೊಯ್ಯುತ್ತದೆ. ಇದರಿಂದ ರೋಗಿಯು ಕಾರ್ಡಿಯಾಕ್ ಅರೆಸ್ಟ್ ಹಾಗೂ ಸಡನ್ ಡೆತ್‍ನಿಂದ ಪಾರಾಗಲು ಸಹಾಯವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.