
ಹಳೇಬೀಡು: ರೈತರ ಮಕ್ಕಳು ಹೊಲ, ಮನೆ ತಂದೆ ತಾಯಿ ತೊರೆದು ವಲಸೆ ಹೋಗಬಾರಾದು. ಉದ್ಯೋಗಕ್ಕಾಗಿ ನಗರಕ್ಕೆ ಹೋದರೂ ತಂದೆ ತಾಯಿ ನೋಡಿಕೊಂಡು ಪರಂಪರೆಯಿಂದ ಬಂದಿರುವ ಕೃಷಿ ಕಾಯಕವನ್ನು ಕಾಪಾಡಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹಾಗೂ ಜಲಾನಯನ ಅಭಿವೃದ್ದಿ ಘಟಕ ಯೋಜನೆಯಡಿ ಗಂಗೂರು ಗ್ರಾಮದಲ್ಲಿ ಬುಧವಾರ ನಡೆದ ವಾಟರ್ ಶೆಡ್ ಮಹೋತ್ಸವ, ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತ ಜಾಗೃತನಾಗಿ ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಂಡಾಗ, ಅಧಿಕಾರಿ ವರ್ಗ ರೈತರ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ಗಂಗೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಂತೆ ಹಳ್ಳಿಗಳಿಗೆ ತಲುಪಬೇಕು. ಎಂದರು. ರೈತರಿಗೆ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ಕೊಡಲು ಅನುಕೂಲವಾಗುತ್ತದೆ. ರೇಷ್ಮೆ , ಪಶು ಪಾಲನೆ, ತೋಟಗಾರಿಕೆ, ಮೀನುಗಾರಿಕೆ ಇಲಾಖೆಗಳಿಂದ ವಸ್ತು ಪ್ರದರ್ಶನ ಏರ್ಪಡಿಸಿರುವುದರಿಂದ ರೈತರಿಗೆ ಕೃಷಿ ಸಂಬಧಿಸಿದ ಇಲಾಖೆಗಳ ಮಾಹಿತಿ ದೊರಕುತ್ತದೆ ಎಂದು ಸುರೇಶ್ ಹೇಳಿದರು.
ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್ ಮಾತನಾಡಿ, ಮಾಜಿ ಪ್ರಧಾನಿ ಚರಣ್ ಸಿಂಗ್ ಜಯಂತಿಯನ್ನು
ರೈತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಇವರು ತಮ್ಮ ಆಡಳಿತದ ಅವದಧಿಯಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಲಕ್ಷಾಂತರ ಮಂದಿಗೆ ಭೂಮಿ ಕೊಡಿಸಿದರು. ರೈತರ ಹಿತಕ್ಕಾಗಿ ಹಲವು ಯೋಜನೆ ಜಾರಿಗೆ ತಂದಿದ್ದರು.
ದೇಶದ ಪ್ರಗತಿಯಲ್ಲಿ ರೈತರ ಪಾತ್ರ ಮುಖ್ಯವಾಗಿದೆ. ಹೀಗಾಗಿ ಸರ್ಕಾರಗಳು ರೈತರ ಪ್ರಗತಿಗೆ ಹೆಚ್ಚು ಯೋಜನೆ ಜಾರಿಗೆ ತರುತ್ತಿದೆ ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ಕಾಂತರಾಜು, ತೋಟಗಾರಿಕಾ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸತೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಕುಮಾರಿ, ಸದಸ್ಯ ಬಾಲಚಂದ್ರ, ಕೃಷಿಕ ಸಮಾಜದ ಅಧ್ಯಕ್ಷ ಜಯರಾಂ, ಪ್ರತಿನಿಧಿ ದೊಡ್ಡವೀರೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಂಗೇಗೌಡ, ಮುಖಂಡರಾದ ಸಿದ್ದೇಶ್, , ಸಣ್ಣೇಗೌಡ, ಪರಮೇಶ್, ಕುಮಾರ್, ಬಸವರಾಜು, ಶಿವಪ್ಪ, ಸುರೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.