ADVERTISEMENT

ನವಿಲೆ ಪಂಚಾಯಿತಿ: ಪವಿತ್ರ ಪರಮೇಶ್ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 14:20 IST
Last Updated 4 ಜುಲೈ 2025, 14:20 IST
ನವಿಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ನವಿಲೆ ಹೊಸೂರು ಗ್ರಾಮದ ಎಸ್.ಡಿ. ಪವಿತ್ರ ಪರಮೇಶ್ ಹಾಗೂ ನಂಜುಂಡಸ್ವಾಮಿ ಅವರನ್ನು ಮುಖಂಡರು ಅಭಿನಂದಿಸಿದರು
ನವಿಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ನವಿಲೆ ಹೊಸೂರು ಗ್ರಾಮದ ಎಸ್.ಡಿ. ಪವಿತ್ರ ಪರಮೇಶ್ ಹಾಗೂ ನಂಜುಂಡಸ್ವಾಮಿ ಅವರನ್ನು ಮುಖಂಡರು ಅಭಿನಂದಿಸಿದರು   

ಬಾಗೂರು (ನುಗ್ಗೇಹಳ್ಳಿ): ಹೋಬಳಿಯ ನವಿಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನವಿಲೆ ಹೊಸೂರು ಗ್ರಾಮದ ಎಸ್.ಡಿ. ಪವಿತ್ರ ಪರಮೇಶ್ ಹಾಗೂ ಉಪಾಧ್ಯಕ್ಷರಾಗಿ ನಂಜುಂಡಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಜ್ಯೋತಿ ಬಸವರಾಜ್ ಹಾಗೂ ಉಪಾಧ್ಯಕ್ಷರಾಗಿದ್ದ ರಾಮೇಗೌಡ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಹರೀಶ್ ಘೋಷಿಸಿದರು. ಈ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಕ್ಷೇತ್ರದ ಶಾಸಕರಾದ ಸಿ.ಎನ್ ಬಾಲಕೃಷ್ಣ ಅವರ ಸಲಹೆ ಸಹಕಾರ ಪಡೆದು ಅಭಿವೃದ್ಧಿ ಕೆಲಸ ಮಾಡಲಾಗುವುದು. ನವಿಲೆ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ನವಿಲೆ ನಾಗೇಶ್ವರ ಸ್ವಾಮಿ ದೇವಾಲಯಕ್ಕೆ ಪ್ರತಿನಿತ್ಯ ಬರುವ ಭಕ್ತರ ಅನುಕೂಲಕ್ಕಾಗಿ ರಸ್ತೆ, ಕುಡಿಯುವ ನೀರು ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ತಿಳಿಸಿದರು.

ಕೃಷಿ ಪತ್ತಿನ ಅಧ್ಯಕ್ಷ ಕುಮಾರಸ್ವಾಮಿ, ತಗಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮರಾಜ್, ಮಾಜಿ ಕೃಷಿ ಪತ್ತಿನ ಅಧ್ಯಕ್ಷ ಎನ್‌.ಬಿ ನಾಗರಾಜ್, ಪಿಡಿಒ ದೇವರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ರಂಗೇಗೌಡ, ಪ್ರೇಮಲತಾ ದಿನೇಶ್, ಪ್ರದೀಪ ಟಿ. ಡಿ, ಎನ್‌.ಬಿ ಸೋಮಶೇಖರ್, ರಾಜಲಕ್ಷ್ಮಿ ನಾಗರಾಜ್, ಎನ್.ಸಿ. ರವೀಶ್, ಕೆ.ಆರ್. ಸುಜಾತಾ ಬಸವರಾಜ್, ಮುಖಂಡರಾದ ದೇವರಾಜು, ಎನ್.ಕೆ. ನಾಗಪ್ಪ, ನವಿಲೆ ಹೊಸೂರು ಬಸವರಾಜ್, ದಿನೇಶ್, ಎನ್.ಎನ್ ಕುಮಾರಸ್ವಾಮಿ, ಶಿವಕುಮಾರ್, ಕುಳ್ಳೇಗೌಡ, ಬಿಲ್ ಕಲೆಕ್ಟರ್ ರವೀಶ್ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.