ADVERTISEMENT

ಬಾಗೂರು | ರಥ ನಿರ್ಮಾಣಕ್ಕೆ ಅಗತ್ಯ ಸಹಕಾರ: ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 10 ಮೇ 2025, 16:21 IST
Last Updated 10 ಮೇ 2025, 16:21 IST
ಬಾಗೂರು ಹೋಬಳಿ ಕೇಂದ್ರದ ಸಂತೆಕಾಳೇಶ್ವರಿ ಹಾಗೂ ಚಿಕ್ಕಮ್ಮ ದೇವಿ ದೇವಾಲಯದಲ್ಲಿ 48ನೇ ದಿನದ ಪೂಜಾ ಮಹೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಿ.ಎನ್. ಬಾಲಕೃಷ್ಣ ಪಾಲ್ಗೊಂಡರು
ಬಾಗೂರು ಹೋಬಳಿ ಕೇಂದ್ರದ ಸಂತೆಕಾಳೇಶ್ವರಿ ಹಾಗೂ ಚಿಕ್ಕಮ್ಮ ದೇವಿ ದೇವಾಲಯದಲ್ಲಿ 48ನೇ ದಿನದ ಪೂಜಾ ಮಹೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಿ.ಎನ್. ಬಾಲಕೃಷ್ಣ ಪಾಲ್ಗೊಂಡರು   

ಬಾಗೂರು: ‘ಹೋಬಳಿ ಕೇಂದ್ರದ ಶಕ್ತಿ ದೇವತೆ ಸಂತೆಕಾಳೇಶ್ವರಿ ಹಾಗೂ ಚಿಕ್ಕಮ್ಮದೇವರ ನೂತನ ರಥವನ್ನು ₹ 1.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ರಥ ನಿರ್ಮಾಣಕ್ಕೆ ಹೆಚ್ಚಿನ ಹಣಕಾಸಿನ ನೆರವು ನೀಡುವುದಾಗಿ’ ಶಾಸಕ ಸಿ.ಎನ್. ಬಾಲಕೃಷ್ಣ ಭರವಸೆ ನೀಡಿದರು.

ಗ್ರಾಮದ ಸಂತೆಕಾಳೇಶ್ವರಿ, ಚಿಕ್ಕಮ್ಮ ದೇವಿಯವರ ದೇವಾಲಯದಲ್ಲಿ ಶನಿವಾರ ನಡೆದ 48ನೇ ದಿನದ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನೂತನ ದೇವಾಲಯ ನಿರ್ಮಾಣಕ್ಕೆ ಈಗಾಗಲೇ ಹೇಮಾವತಿ ನೀರಾವರಿ ಇಲಾಖೆ, ವಿವಿಧ ಅನುದಾನ ಸೇರಿದಂತೆ ಸುಮಾರು ₹ 90 ಲಕ್ಷ ಕೊಡಲಾಗಿದ್ದು, ಮುಂಬರುವ ದಿನಗಳಲ್ಲಿ ನೂತನ ರಥ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡುವುದಾಗಿ’ ಹೇಳಿದರು.

ADVERTISEMENT

ಎಪಿಎಂಸಿ ಮಾಜಿ ಅಧ್ಯಕ್ಷ ಬಾಗೂರು ಶಿವಣ್ಣ ಮಾತನಾಡಿ, ‘ದೇವಾಲಯ ನಿರ್ಮಾಣಕ್ಕೆ ಬಾಲಕೃಷ್ಣ ಹೆಚ್ಚಿನ ಸಹಕಾರ ನೀಡಿದ್ದಾರೆ. ರಥ ನಿರ್ಮಾಣಕ್ಕೆ ₹1.50 ಕೋಟಿ ಬೇಕಾಗಿದ್ದು, ಪಕ್ಷಾತೀತವಾಗಿ ಎಲ್ಲ ಮುಖಂಡರು ಸಹಕಾರ ನೀಡಬೇಕು’ ಎಂದರು.

ದೇವಾಲಯದಲ್ಲಿ 48ನೇ ದಿನದ ಮಂಡಲ ಪೂಜಾ ಮಹೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ಅಮ್ಮನವರಿಗೆ ಅಭಿಷೇಕ, ವಿಶೇಷ ಪೂಜೆ, ನೈವೇದ್ಯ ಹೂವಿನ ಅಲಂಕಾರ, ಹೋಮ ಹವನಗಳು ನೆರವೇರಿದವು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಟಿಎಪಿಎಂಎಸ್ ನಿರ್ದೇಶಕ ಮನು, ಗುಡಿ ಗೌಡ್ರು ಕರಿಗಲ್ಲು ಶೇಖರಣ್ಣ, ಮಾಜಿ ಗುಡಿಗೌಡ್ರು ತಿಮ್ಮೇಗೌಡ (ಅಣ್ಣಯ್ಯ), ಪಾಪಣ್ಣ( ಬಳಗಟ್ಟೆ), ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಲ್ಲೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಾಂತರಾಜ್, ಬಿ.ಪಿ. ಲಕ್ಷ್ಮಣ್, ತಿಮ್ಮೇಗೌಡ್ರು, ಕೃಷಿ ಪತ್ತಿನ ನಿರ್ದೇಶಕ ಬಿ.ಎನ್. ಹರೀಶ್, ಬಿ.ಜೆ. ರಂಗಸ್ವಾಮಿ, ಗ್ರಾಪಂ ಸದಸ್ಯ ಬಿ.ಟಿ. ರಂಗಸ್ವಾಮಿ, ಮುಖಂಡರಾದ ಮಿಲ್ಟ್ರಿ ಮಧು, ಸೋಮಶೇಖರ್, ಕಾಳೇಶ್, ಚೇತನ್, ಬಿಎಸ್ ಮೋಹನ್ ಕುಮಾರ್, ದೇವರಾಜ್, ಅಂಚೆ ಇಲಾಖೆ ಸಂತೋಷ್ ಕುಮಾರ್, ಗ್ರಾ ಪಂ ಕಾರ್ಯದರ್ಶಿ ಶ್ರೀನಿವಾಸ್, ಯುವ ಮುಖಂಡ ಕರಿಗಲ್ಲು ರಘು, ಕೆನರಾ ಬ್ಯಾಂಕ್ ಬಿ.ಟಿ. ಮಂಜೇಗೌಡ, ಕಾರು ರಂಗಸ್ವಾಮಿ, ಸೊಪ್ಪಿನ ಬೀದಿ ಚೇತನ್, ಸೇರಿದಂತೆ ಬಾಗೂರು ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.