ADVERTISEMENT

ಗಂಡಸಿ | ಏಡ್ಸ್‌ ಕುರಿತು ಜಾಗೃತಿ ಅಗತ್ಯ: ಡಾ.ಐಶ್ವರ್ಯಾ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2024, 12:31 IST
Last Updated 29 ನವೆಂಬರ್ 2024, 12:31 IST
ಗಂಡಸಿ ಹ್ಯಾಂಡ್‌ಪೋಸ್ಟ್‌ ಎಪಿಎಂಸಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು, ಸಿಬ್ಬಂದಿ ಏಡ್ಸ್ ಜಾಗೃತಿ ಕುರಿತ ಭಿತ್ತಿಪತ್ರ ಪ್ರದರ್ಶಿಸಿದರು
ಗಂಡಸಿ ಹ್ಯಾಂಡ್‌ಪೋಸ್ಟ್‌ ಎಪಿಎಂಸಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು, ಸಿಬ್ಬಂದಿ ಏಡ್ಸ್ ಜಾಗೃತಿ ಕುರಿತ ಭಿತ್ತಿಪತ್ರ ಪ್ರದರ್ಶಿಸಿದರು   

ಗಂಡಸಿ: ಎಚ್ಐವಿ ಮನುಷ್ಯನ ರೋಗ ನಿರೋಧಕ ಶಕ್ತಿ ಕುಗ್ಗಿಸುವ ಒಂದು ವೈರಾಣು. ಮನುಷ್ಯನ ದೇಹ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಮಾಡಿ, ಇತರೆ ರೋಗಗಳಿಗೆ ದಾರಿ ಮಾಡಿಕೊಡುವುದೇ ಏಡ್ಸ್ ಎಂದು ಕೊಂಡೆನಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಐಶ್ವರ್ಯಾ ತಿಳಿಸಿದರು.

ಹೋಬಳಿಯ ಗಂಡಸಿ ಹ್ಯಾಂಡ್ ಪೋಸ್ಟ್ ಎಪಿಎಂಸಿ. ಆವರಣದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಚೈತನ್ಯ ಗ್ರಾಮಾಭಿವೃದ್ಧಿ ಸಂಸ್ಥೆ, ಲಾಳನಕೆರೆ ಗ್ರಾಮ ಪಂಚಾಯಿತಿ ಹಾಗೂ ಕೊಂಡೇನಾಳು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಶ್ರಯದಲ್ಲಿ ಎಚ್.ಐ.ವಿ./ ಏಡ್ಸ್ ಕುರಿತು ನಡೆದ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಹು ಸಂಗಾತಿಯರ ಜೊತೆ ಕಾಂಡೋಮ್ ಬಳಸದೆ ಲೈಂಗಿಕ ಸಂಪರ್ಕ ಬೆಳೆಸುವುದು, ಎಚ್‌ಐವಿ ಸೋಂಕಿತನ ರಕ್ತ ಪರೀಕ್ಷೆ ಮಾಡದೇ ಪಡೆಯುವುದು, ಸಂಸ್ಕರಣೆ ಮಾಡದ ಸಿರಿಂಜ್‌ ಬಳಸುವುದರಿಂದ ಎಚ್‌ಐವಿ ಸೋಂಕು ಹರಡಲಿದೆ. ಇಂದಿನ ಯುವ ಜನತೆಯ ಆರೋಗ್ಯದ ಮೇಲೆ ದೇಶದ ಭವಿಷ್ಯವಿದ್ದು, ಆರೋಗ್ಯದ ಬಗ್ಗೆ ಅರಿವು ಪಡೆದುಕೊಂಡು ದೇಶ ಮುನ್ನಡೆಸಲು ಎಚ್‌ಐವಿ ರೋಗದಿಂದ ಪಾರಾಗಿ ಎಂದರು.

ADVERTISEMENT

ಜಿಲ್ಲಾ ಮೇಲ್ವಿಚಾರಕರಾದ ರವಿಕುಮಾರ್, ಅಶೋಕ್, ಅಭಿ, ವೆಂಕಟೇಶ್, ಡಿ. ಆರ್.ಪಿ. ಚೈತ್ರಾ, ಅನುರಾಧಾ, ಗಂಡಸಿ ಸಮುದಾಯ ಆರೋಗ್ಯ ಕೇಂದ್ರದ ಅನಿಲ್ ಕುಮಾರ್, ನಾಗರಾಜು, ರಾಮಪ್ಪ, ತೇಜು ಮೂರ್ತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.