ADVERTISEMENT

ನೆರೆ ಸಂತ್ರಸ್ತರಿಗೆ ₹ 47 ಸಾವಿರ ದೇಣಿಗೆ

ಮನುಷ್ಯನ ದುರಾಸೆಯಿಂದ ಅರಣ್ಯ ನಾಶ: ಆತಂಕ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 11:02 IST
Last Updated 30 ಆಗಸ್ಟ್ 2018, 11:02 IST
ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎಚ್.ಆರ್.ಸುಲೋಚನ ಅವರು ಸ್ಕೌಟ್ಸ್ ಜಿಲ್ಲಾ ಸಂಸ್ಥೆಯ ಸಂಘಟನಾ ಆಯುಕ್ತರಿಗೆ ಪ್ರವಾಹ ದೇಣಿಗೆ ಚೆಕ್‌ಹಸ್ತಾಂತರಿಸಿದರು.
ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎಚ್.ಆರ್.ಸುಲೋಚನ ಅವರು ಸ್ಕೌಟ್ಸ್ ಜಿಲ್ಲಾ ಸಂಸ್ಥೆಯ ಸಂಘಟನಾ ಆಯುಕ್ತರಿಗೆ ಪ್ರವಾಹ ದೇಣಿಗೆ ಚೆಕ್‌ಹಸ್ತಾಂತರಿಸಿದರು.   

ಹಾಸನ : ಕಷ್ಟದಲ್ಲಿ ಇರುವವರಿಗೆ ಕೈಲಾದಷ್ಟು ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪ್ರಾಂಶುಪಾಲರಾದ ಎಚ್.ಆರ್.ಸುಲೋಚನ ಹೇಳಿದರು.

ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ಹೊಸದು) ಸ್ಕೌಟ್ಸ್ ಮತ್ತು ಗೈಡ್ಸ್ನ ಶಾರದಾದೇವಿ ರೇಂಜರ್ಸ್ ಘಟಕ ಸಂಗ್ರಹಿಸಿದ ಪ್ರವಾಹ ದೇಣಿಗೆ ಚೆಕ್‌ ಅನ್ನು ಜಿಲ್ಲಾ ಸಂಸ್ಥೆಯ ಸಂಘಟನಾ ಆಯುಕ್ತರಿಗೆ ಹಸ್ತಾಂತರಿಸಿ ಮಾತನಾಡಿದರು.

‘ಪ್ರಕೃತಿ ವಿಕೋಪದಿಂದ ಕೊಡಗು, ಕೇರಳ ಜನ ತತ್ತರಿಸಿ ಹೋಗಿದ್ದಾರೆ. ಯಾವಾಗ ಯಾರಿಗೆ ಇಂತಹ ದುಃಸ್ಥಿತಿ ಬರುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಸಹಾಯ ಮಾಡಬೇಕಾದದ್ದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ರೇಂಜರ್ಸ್ ಮಕ್ಕಳು ನಾಲ್ಕೈದು ದಿನ ₹ 47,000 ದೇಣಿಗೆ ಸಂಗ್ರಹಿಸಿರುವುದು ಶ್ಲಾಘನೀಯ’ ಎಂದರು.

‘ಅವೈಜ್ಞಾನಿಕ ಕಟ್ಟಡ ನಿರ್ಮಾಣ ಮತ್ತು ಮನುಷ್ಯನ ದುರಾಸೆಯಿಂದ ಪ್ರಕೃತಿ ನಾಶವಾಗುತ್ತಿದೆ. ಅರಣ್ಯ ನಾಶದಿಂದ ನಿಸರ್ಗದಲ್ಲಿ ಅಸಮತೋಲನ ಉಂಟಾಗಿ ಪ್ರಾಕೃತಿಕ ವಿಕೋಪ ಸಂಭವಿಸಲು ಕಾರಣವಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸ್ಕೌಟ್ಸ್, ಗೈಡ್ಸ್‌ಜಿಲ್ಲಾ ಸಂಘಟನಾ ಆಯುಕ್ತ ಕೊಟ್ರೇಶ್ ಎಸ್.ಉಪ್ಪಾರ್, ಕಾಲೇಜಿನ ರೇಂಜರ್ ಲೀಡರ್ ಎಚ್.ಎ.ಪದ್ಮಿನಿ, ಕಿರಣ್, ಉಪನ್ಯಾಸಕಿ ಶೃತಿ, ಶಾಂತ, ಹೇಮಾವತಿ, ರೋವರ್ ಲೀಡರ್ ಕೆ.ಪಿ.ಸ್ವಾಮಿ ಹಾಗೂ ರೇಂಜರ್ಸ್ ಮಕ್ಕಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.