ADVERTISEMENT

ಸಕಲೇಶಪುರ: ಟ್ರ್ಯಾಕ್ಟರ್ ನಂಬರ್‌‌‌‌ಗೆ ಹೆಲ್ಮೆಟ್ ಹಾಕಲಿಲ್ಲ ಎಂದು ನೋಟಿಸ್

​ಪ್ರಜಾವಾಣಿ ವಾರ್ತೆ
Published 15 ಮೇ 2025, 15:15 IST
Last Updated 15 ಮೇ 2025, 15:15 IST
ಸಕಲೇಶಪುರ ತಾಲ್ಲೂಕಿನ ಯಡೇಹಳ್ಳಿ ಆರ್. ಮಂಜುನಾಥ್ ಅವರ ಈ ಟ್ರ್ಯಾಕ್ಟರ್‌ ಓಡಿಸುವಾಗ ಹೆಲ್ಮೆಟ್ ಹಾಕಿಲ್ಲ ಎಂದು ಪೊಲೀಸರು 500 ರೂಪಾಯಿ ದಂಡ ಹಾಕಿದ್ದಾರೆ
ಸಕಲೇಶಪುರ ತಾಲ್ಲೂಕಿನ ಯಡೇಹಳ್ಳಿ ಆರ್. ಮಂಜುನಾಥ್ ಅವರ ಈ ಟ್ರ್ಯಾಕ್ಟರ್‌ ಓಡಿಸುವಾಗ ಹೆಲ್ಮೆಟ್ ಹಾಕಿಲ್ಲ ಎಂದು ಪೊಲೀಸರು 500 ರೂಪಾಯಿ ದಂಡ ಹಾಕಿದ್ದಾರೆ   

ಸಕಲೇಶ‍ಪುರ: ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿದ್ದೀರಿ, ₹500 ದಂಡ ಕಟ್ಟಿ, ಕಾನೂನು ಕ್ರಮ ತಪ್ಪಿಸಿಕೊಳ್ಳಿ ಎಂದು ತಾಲ್ಲೂಕಿನ ಯಡೇಹಳ್ಳಿ ಆರ್.ಮಂಜುನಾಥ್ ಅವರಿಗೆ ಪೊಲೀಸ್ ಇಲಾಖೆಯಿಂದ ನೋಟೀಸ್‌ ನೀಡಿರುವ ವಿಶೇಷ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಪೊಲೀಸರು ಕಳುಹಿಸಿರುವ ನೋಟಿಸ್‌‌ನಲ್ಲಿ ಮೈಸೂರಿನ ಊಟಿ ರಸ್ತೆಯ ಯಲಚಗೆರೆಬೋರೆ ವೃತ್ತದಲ್ಲಿ ನೋಂದಣಿ ಸಂಖ್ಯೆ KA18 T 1006 ಈ ವಾಹನವನ್ನು 2025-05-08 16:01ರ ಸಮಯದಲ್ಲಿ ಹೆಲ್ಮೆಟ್ ಹಾಕದೆ ಚಾಲನೆ ಮಾಡಿದ್ದೀರಿ. ಹಾಗಾಗಿ ದಂಟ ಕಟ್ಟಿ’ ಎಂದು ತಿಳಿಸಲಾಗಿದೆ.  

ಈ ಸಂಬಂಧ ಮಂಜುನಾಥ ಅವರು ‘ಈ ನಂಬರಿನ ದ್ವಿಚಕ್ರ ವಾಹನವೇ ನಮ್ಮ ಬಳಿ ಇಲ್ಲ, ಆ ದಿನ ಸಕಲೇಶಪುರದಲ್ಲಿಯೇ ಇದ್ದೇನೆ, 6 ತಿಂಗಳಿಂದ ಮೈಸೂರಿಗೆ ಹೋಗಿಲ್ಲ, ಆದರೆ, ನಮ್ಮ ಮನೆಯ ಟ್ರ್ಯಾಕ್ಟರ್‌‌‌‌ಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಪೊಲೀಸ್ ಸಿಬ್ಬಂದಿ ಮಾಡಿರುವ ಯಡವಟ್ಟಿಗೆ ನಾನೇಕೆ ದಂಡ ಕಟ್ಟಲಿ, ಬೇಕಾದರೆ ಟ್ರ್ಯಾಕ್ಟರ್ ಓಡಿಸುವಾಗ ಹೆಲ್ಮೆಟ್‌ ಹಾಕಿಕೊಳ್ಳುವೆ. ದಂಡ ಮಾತ್ರ ಕಟ್ಟಲ್ಲ’ ಎಂದು ಪಟ್ಟು ಹಿಡಿದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.