ADVERTISEMENT

ನುಗ್ಗೇಹಳ್ಳಿ: ಮಹಾದೇಶ್ವರ ಸ್ವಾಮಿ ಕೆಂಡಕೊಂಡೋತ್ಸವ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:30 IST
Last Updated 24 ಫೆಬ್ರುವರಿ 2026, 7:30 IST
ನುಗ್ಗೇಹಳ್ಳಿ ಗ್ರಾಮದಲ್ಲಿ ಮಹಾದೇಶ್ವರ ಸ್ವಾಮಿ ಅವರ 35ನೇ ವರ್ಷದ ಕೆಂಡಕೊಂಡೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಸಿ.ಎನ್. ಬಾಲಕೃಷ್ಣ  ಪಾಲ್ಗೊಂಡಿದ್ದರು 
ನುಗ್ಗೇಹಳ್ಳಿ ಗ್ರಾಮದಲ್ಲಿ ಮಹಾದೇಶ್ವರ ಸ್ವಾಮಿ ಅವರ 35ನೇ ವರ್ಷದ ಕೆಂಡಕೊಂಡೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಸಿ.ಎನ್. ಬಾಲಕೃಷ್ಣ  ಪಾಲ್ಗೊಂಡಿದ್ದರು    

ನುಗ್ಗೇಹಳ್ಳಿ: ವೀರಶೈವ ಸಮಾಜದ ವತಿಯಿಂದ ಮಹಾದೇಶ್ವರ ಸ್ವಾಮಿ 35ನೇ ವರ್ಷದ ಕೆಂಡಕೊಂಡೋತ್ಸವ ಸೋಮವಾರ ನೆರವೇರಿತು. ವಿಶೇಷ ಪೂಜೆ, ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ಗ್ರಾಮದ ಪೇಟೆ ಬೀದಿಯಲ್ಲಿರುವ  ಬಸವಣ್ಣ ದೇವಾಲಯದಲ್ಲಿ  ಬೆಳಗ್ಗೆಯಿಂದಲೇ ವಿಶೇಷ ಅಭಿಷೇಕ ಪೂಜೆ ಹೂವಿನ ಅಲಂಕಾರ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು. ನಂತರ ಮಹಾದೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಮೆರವಣಿಗೆಯೊಂದಿಗೆ ಹಿರಿಸಾವೆ ರಸ್ತೆಯಲ್ಲಿರುವ ಮಹಾದೇಶ್ವರ ಸ್ವಾಮಿ ಗದ್ದುಗೆಗೆ ಕರೆತರಲಾಯಿತು. ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು.

ಪುರವರ್ಗ ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂಜೆ ನೆರವೇರಿತು. ಭಕ್ತರಿಗೆ ಆಶೀರ್ವಚನ ನೀಡಿದ ಅವರು, ‘ಉತ್ತಮ ಮಳೆ ಬೆಳೆಯಾಗಿ ರೈತರ ಬದುಕು ಹಸನಾಗಲಿ. ಜೊತೆಗೆ ಮುಂಬರುವ ಎಸ್‌ಎಸ್‌ಎಲಗಗಸಿ, ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಉತ್ತೀರ್ಣರಾಗಲಿ’ ಎಂದು ಹಾರೈಸಿದರು.

ADVERTISEMENT

ಶಾಸಕ ಸಿ.ಎನ್. ಬಾಲಕೃಷ್ಣ  ಪೂಜೆಯಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.‘ಹೋಬಳಿ ಕೇಂದ್ರದಲ್ಲಿ ಈಗಾಗಲೇ ವೀರಶೈವ ಸಮಾಜದ ವತಿಯಿಂದ ಭವನ ನಿರ್ಮಾಣ ಮಾಡಲಾಗಿದೆ. ಶುಭ ಕಾರ್ಯಗಳಿಗೆ ಹೆಚ್ಚಿನ ಅನುಕೂಲವಾಗಲೆಂದು ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಮುಂಬರುವ ದಿನಗಳಲ್ಲಿ ಅನುದಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಜಯಣ್ಣ ಸ್ವಾಮೀಜಿ, ವೀರಶೈವ ಸಮಾಜದ ಹಿರಿಯರಾದ ಸಿಬಿ ಚೆನ್ನ ಮಲ್ಲಪ್ಪ, ಎನ್‌ಟಿ ಸಿದ್ದಪ್ಪ, ಸರ್ವ ಮಂಗಳಮ್ಮ, ಮುಖಂಡರಾದ ಮೆಡಿಕಲ್ ವೆಂಕಟೇಶ್, ದೊರೆಸ್ವಾಮಿ, ತೋಟಿ ನಾಗರಾಜು, ಎಚ್.ಬಿ. ರಂಗಸ್ವಾಮಿ, ಓಬಳಾಪುರ ಬಸವರಾಜು, ಪಟೇಲ್ ಕುಮಾರ್, ಹುಲಿಕೆರೆ ಸಂಪತ್ ಕುಮಾರ್, ಕೃಪಾ ಶಂಕರ್, ಎಂ.ಎಸ್.ಸುರೇಶ್, ಹೋಬಳಿ ಅಧ್ಯಕ್ಷ ಎನ್ ಎಸ್ ಗಿರೀಶ್, ಸಮಾಜದ ಪ್ರಮುಖರಾದ ಎನ್ ಸಿ ಕುಮಾರಸ್ವಾಮಿ, ಎನ್‌ಸಿ ವಿಶ್ವನಾಥ್, ಜಯಕೀರ್ತಿ, ಗಣೇಶ್, ಮಹೇಶ್, ಆನಂದ್, ಎನ್ ಆರ್ ಪ್ರದೀಪ್, ಎನ್‌ಪಿ ಪ್ರದೀಪ್, ಉದ್ಯಮಿಗಳಾದ ಎನ್‌ಬಿ ಲೋಹಿತ್, ಎನ್‌ಬಿ ವಿನಯ್, ವಿಜಯ್ ಕುಮಾರ್, ಎನ್ಎಂ ಉಮೇಶ್, ರಾಜು, ಹೋಟೆಲ್ ಗುರು, ಎನ್‌ಸಿ ಉಮೇಶ್, ಹೋಟೆಲ್ ಮಂಜು, ರೇಣುಕಾ ಸ್ವಾಮಿ, ಎನ್ ಎನ್ ತ್ರಿನೇಶ್ , ಎನ್ ಆರ್ ತೇಜಸ್, ಅರುಣ, ಚಿಂಟು, ರುದ್ರಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.