ADVERTISEMENT

ಯುದ್ಧ ಮುಗಿದ ಬಳಿಕ ಆಫ್‌ಲೈನ್ ತರಗತಿ: ಉಕ್ರೇನ್‌ ನಿಂದ ಮನೆಗೆ ಮರಳಿದ ಅರ್ಪಿತಾ

ಉಕ್ರೇನ್‌ ನಿಂದ ಮನೆಗೆ ಮರಳಿದ ತಟ್ಟೆಕೆರೆಯ ಅರ್ಪಿತಾ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 15:30 IST
Last Updated 3 ಮಾರ್ಚ್ 2022, 15:30 IST
ಅರ್ಪಿತಾ
ಅರ್ಪಿತಾ   

ಹಾಸನ: ‘ಉಕ್ರೇನ್‌ನಲ್ಲಿ ಯುದ್ಧ ಆರಂಭವಾಗುತ್ತಿದ್ದಂತೆ ಭಯ ಶುರುವಾಗಿತ್ತು. ಬಾಂಬ್ ಸ್ಫೋಟಗೊಳ್ಳುತ್ತಿದ್ದ ಕಾರಣ ಎಂಟು ಗಂಟೆ ಬಸ್‍ನಲ್ಲೇ ಕಳೆಯಬೇಕಾಯಿತು’ ಎಂದು ತವರಿಗೆ ಮರಳಿದ ವಿದ್ಯಾರ್ಥಿ ಅರ್ಪಿತಾ ಹೇಳಿದರು.

ತಾಲ್ಲೂಕಿನ ತಟ್ಟೆಕೆರೆ ನಿವಾಸಿ ಧರ್ಮೇಗೌಡ, ಮಂಜುಳಾ ದಂಪತಿಯ ಪುತ್ರಿಅರ್ಪಿತಾ ಸುರಕ್ಷಿತವಾಗಿ ಮನೆ ತಲುಪಿದ್ದು, ಯುದ್ಧ ನಾಡಿನ ಪರಿಸ್ಥಿತಿ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

‘ಪಶ್ಚಿಮ ಭಾಗಕ್ಕಿಂತ ಪೂರ್ವ ಭಾಗದಲ್ಲಿ ಹೆಚ್ಚು ಯುದ್ಧ ನಡೆಯುತ್ತಿತ್ತು. ಹಾಸ್ಟೆಲ್‌ ಬಳಿಗೆ ಬಸ್‌ ಕಳುಹಿಸಿ, ಗಡಿ ಭಾಗಕ್ಕೆ ಭಾರತ ರಾಯಭಾರ ಕಚೇರಿಯವರು ಸುರಕ್ಷಿತವಾಗಿ ಕರೆ ತಂದಿದ್ದಾರೆ. ಅದೇ ರೀತಿ ಹಾರ್ಕಿವ್, ಕೀವ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಬೇಕು; ಎಂದು ಮನವಿ ಮಾಡಿದರು.

ADVERTISEMENT

‘ಮಾರ್ಚ್‌ 14ರ ವರೆಗೆ ಕಾಲೇಜಿಗೆ ರಜೆ ಘೋಷಿಸಿದ್ದಾರೆ. ಯುದ್ಧ ಮುಗಿದಮೇಲೆ ಆಫ್‍ಲೈನ್ ತರಗತಿ ಪ್ರಾರಂಭ ಮಾಡುವುದಾಗಿ ಕಾಲೇಜಿನವರು ತಿಳಿಸಿದ್ದಾರೆ’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.