ADVERTISEMENT

ಪಾಳ್ಯ ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ ಗರಿ:ಆರೋಗ್ಯ ಸಚಿವಾಲಯದಿಂದ 5 ಸ್ಟಾರ್‌ ಗೌರವ

ಎಂ.ಪಿ.ಹರೀಶ್
Published 12 ನವೆಂಬರ್ 2025, 2:15 IST
Last Updated 12 ನವೆಂಬರ್ 2025, 2:15 IST
<div class="paragraphs"><p>ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರ</p></div>

ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರ

   

ಆಲೂರು: ತಾಲ್ಲೂಕಿನ ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನ್ಯಾಷನಲ್ ಹೆಲ್ತ್ ಸಿಸ್ಟಮ್ಸ್ ರಿಸೋರ್ಸ್ ಸೆಂಟರ್, ಕೇಂದ್ರ ಆರೋಗ್ಯ ಸಚಿವಾಲಯದಿಂದ ರಾಷ್ಟ್ರ ಮಟ್ಟದ 5 ಸ್ಟಾರ್ ಪ್ರಶಸ್ತಿ ಲಭಿಸಿದೆ.

ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 23 ವರ್ಷ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಡಾ. ನಿಸಾರ್‌ ಫಾತಿಮಾ ಮತ್ತು ತಂಡದವರ ಸೇವೆ ಮತ್ತು ಶ್ರಮಕ್ಕೆ ಪ್ರಶಸ್ತಿ ಲಭಿಸಿದ್ದು, ಡಾ. ನಿಸಾರ್‌ ಫಾತಿಮಾ ಅವರು ಸದ್ಯಕ್ಕೆ ತಾಲ್ಲೂಕು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ADVERTISEMENT

ಪ್ರಶಸ್ತಿಗೆ ಆಯ್ಕೆಯಾಗುವ ಮುನ್ನ, ಆಸ್ಪತ್ರೆಯ ಪ್ರತಿಯೊಂದು ವಿಭಾಗದಲ್ಲಿ ದಿನದ 24 ಗಂಟೆ ನಡೆಯುವ ಪ್ರಕ್ರಿಯೆಯನ್ನು ದಾಖಲು ಮಾಡಿರಬೇಕು. ಆಸ್ಪತ್ರೆಯಲ್ಲಿರುವ ಉಪಕರಣಗಳ ಗುಣಮಟ್ಟ, ಬಳಕೆ, ಸ್ವಚ್ಛತೆ, ಔಷಧಿ ವಿತರಣೆ, ರೋಗಿಗಳಿಗೆ ಉಪಚಾರ, ದಾಖಲಾತಿ, ರೋಗಿಗಳಿಗೆ ವಿತರಿಸಿದ ಔಷಧಿ ದಾಖಲಾತಿ, ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸಾಗಿಸುವ ದಾಖಲು, ಕಸ ಗುಡಿಸಿದ ಕಾಲ ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ದಾಖಲಾತಿಗಳನ್ನು ಪರಿಶೀಲಿಸಲಾಗುತ್ತದೆ.

ಆಸ್ಪತ್ರೆ ವ್ಯಾಪ್ತಿಗೆ ಒಳಪಡುವ ಹಳ್ಳಿಗಳಿಗೆ ದಾದಿಯರ ಭೇಟಿ, ರೋಗಿಗಳೊಡನೆ ಅವರ ಸ್ಪಂದನೆ, ವಿದ್ಯುತ್ ಅಭಾವದ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ, ಆಸ್ಪತ್ರೆಯಲ್ಲಿ ವಿದ್ಯುತ್ ಸರಬರಾಜು ಪ್ರಕ್ರಿಯೆ, ಕಟ್ಟಡದ ಗುಣಮಟ್ಟ, ಶುದ್ಧೀಕರಣ, ತ್ಯಾಜ್ಯಗಳ ವಿಂಗಡಣೆ, ಸಂಗ್ರಹ, ವಿತರಣೆ ಮಾಡಿದ ದಾಖಲಾತಿಗಳು ಇರಬೇಕು.

ವಯಸ್ಕರು, ಗರ್ಭಿಣಿಯರು ಇನ್ನಿತರೆ ಅಸಹಾಯಕ ರೋಗಿಗಳು ಆಸ್ಪತ್ರೆಗೆ ಬಂದಾಗ ಅವರನ್ನು ಉಪಚರಿಸಲು ಬೇಕಾಗುವ ಪರಿಕರಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ದಾದಿಯರು ಹಳ್ಳಿಗಳಿಂದ ಕಳುಹಿಸಿದ ರೋಗಿ, ಆಸ್ಪತ್ರೆಗೆ ಬಂದು ಉಪಚಾರ ಪಡೆದಿದ್ದಾರೆಯೆ ಎಂಬ ದಾಖಲಾತಿ, ಗಾಲಿ ಕುರ್ಚಿ, ಪ್ರತ್ಯೇಕ ಶೌಚ ವ್ಯವಸ್ಥೆ. ಸ್ಟ್ರಕ್ಚರ್, ಸೇರಿದಂತೆ ರೋಗಿಗಳಿಗೆ ಅಗತ್ಯವಿರುವ ಉಪಕರಣಗಳು. ಸರ್ಕಾರದಿಂದ ಬಂದಿರುವ ಅನುದಾನ ಉಪಯೋಗ ಮಾಡಿಕೊಂಡಿರುವ ದಾಖಲೆ ಗಣನೆಗೆ ತೆಗೆದುಕೊಳ್ಳಲಾಗಿದೆ. ಹೆರಿಗೆ ನಂತರ ಮಗುವಿಗೆ ಪ್ರಾಥಮಿಕ ಹಂತದಲ್ಲಿ ಜಾಂಡೀಸ್ ತಗುಲಿದರೆ, ಪೋಟೊಥೆರಪಿ ಉಪಕರಣ ಸೇರಿದಂತೆ ಎಲ್ಲ ಸೌಲಭ್ಯಗಳ ಪರಿಶೀಲನೆ ಮಾಡಲಾಗಿದೆ.

ಡಾ. ನಿಸಾರ್ ಫಾತಿಮಾ ತಮ್ಮ ಸೇವಾವಧಿಯಲ್ಲಿ ಸುಮಾರು 9ಸಾವಿರ ಹೆರಿಗೆ ಮಾಡಿರುವ ಖ್ಯಾತಿ ಹೊಂದಿದ್ದಾರೆ. ಅಗತ್ಯ ಸೌಲಭ್ಯ ಹೊಂದಿರುವ ಆಸ್ಪತ್ರೆಗೆ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ.
-ಕೆ. ಎಸ್. ಮಂಜೇಗೌಡ ಪಾಳ್ಯ ನಿವಾಸಿ
ಡಾ.ನಿಸಾರ್‌ ಫಾತಿಮಾ
ದಾದಿ ಸಿಬ್ಬಂದಿ ರೋಗಿಗಳ ಸಹಕಾರದಿಂದ ಪ್ರಶಸ್ತಿ
ಮೂರು ವರ್ಷದಲ್ಲಿ ಆರು ಮಾನದಂಡಗಳನ್ನು ಆಧರಿಸಿ ಪ್ರಶಸ್ತಿ ಕೊಡಲಾಗಿದೆ. ಹೆರಿಗೆ ಒಳ ಮತ್ತು ಹೊರ ರೋಗಿಗಳ ವಿಭಾಗ ಲ್ಯಾಬ್ ಆಡಳಿತ ವಿಭಾಗದ ವೈಖರಿ ದಾದಿಯರು ಹಳ್ಳಿಗಳಿಗೆ ಭೇಟಿ ನೀಡುವ ದಾಖಲು ಸೇರಿದಂತೆ ಸುಮಾರು 100 ಕ್ಕೂ ಹೆಚ್ಚು ದಾಖಲು ಪುಸ್ತಕಗಳನ್ನು ಸಲ್ಲಿಸಬೇಕು. ಪ್ರತಿಯೊಂದಕ್ಕೂ ಕ್ರಾಸ್ ಚೆಕ್ ಮಾಡುತ್ತಾರೆ. ಆಸ್ಪತ್ರೆಯಲ್ಲಿನ ದಾದಿ ಸಿಬ್ಬಂದಿ ರೋಗಿಗಳ ಸಹಕಾರದಿಂದ ರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದು ಸಂತೋಷ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಿಸಾರ್‌ ಫಾತಿಮಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.