ADVERTISEMENT

ಸಕಲೇಶಪುರ, ಬೇಲೂರು, ಆಲೂರಿನಲ್ಲಿ ಹೆಚ್ಚು ಮಳೆ: ಎಂಟು ಮನೆಗಳಿಗೆ ಭಾಗಶಃ ಹಾನಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 14:43 IST
Last Updated 19 ಜೂನ್ 2021, 14:43 IST
ಆರ್. ಗಿರೀಶ್
ಆರ್. ಗಿರೀಶ್   

ಹಾಸನ: ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತಶೇಕಡಾ 19 ಹೆಚ್ಚು ಮಳೆಯಾಗಿದ್ದು, ಎಂಟು ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದುಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದಅವರು, ಜೂನ್ ತಿಂಗಳಲ್ಲಿ ವಾಡಿಕೆ ಮಳೆ 88.3ಸೆಂ. ಮೀ ಮಳೆ ಪೈಕಿ 105.5 ಸೆಂ.ಮೀಮಳೆಯಾಗಿದೆ. ಶೇ 19 ರಷ್ಟು ಹೆಚ್ಚುಮಳೆಯಾಗಿದೆ. ಆಲೂರು, ಬೇಲೂರುಮತ್ತು ಸಕಲೇಶಪುರ ತಾಲ್ಲೂಕಿನಲ್ಲಿ ಉತ್ತಮಮಳೆಯಾಗಿದ್ದು, ಸಕಲೇಶಪುರ ತಾಲ್ಲೂಕಿನಲ್ಲಿವಾಡಿಕೆಗಿಂತ ಶೇಕಡಾ 89ರಷ್ಟು ಹೆಚ್ಚು ಮಳೆ
ಸುರಿದಿದೆ. ಜನ, ಜಾನುವಾರು ಪ್ರಾಣಹಾನಿಯಾಗಿಲ್ಲ. ಎಂಟು ಮನೆಗಳು ಭಾಗಶಃ ಕುಸಿದಿದ್ದು, ಪರಿಹಾರ ನೀಡಲಾಗುವುದು ಎಂದು ವಿವರಿಸಿದರು.

ಸಕಲೇಶಪುರದ ಹಾನುಬಾಳು ಸಮೀಪದದೋನಹಳ್ಳಿ ಹಳ್ಳ ಸೇತುವೆ ಕುಸಿದಿದ್ದು , ಸೇತುವೆದುರಸ್ತಿಗೆ ₹50 ಲಕ್ಷ ವೆಚ್ಚದ ಅಂದಾಜು ಪಟ್ಟಿತಯಾರಿಸಿ ಪಂಚಾಯತ್ ರಾಜ್ ಇಲಾಖೆಗೆಪ್ರಸ್ತಾವನೆ ಸಲ್ಲಿಸಲಾಗಿದೆ.ಮಳೆ, ಗಾಳಿಯಿಂದಾಗಿ 135 ವಿದ್ಯುತ್ ಕಂಬಗಳುಹಾನಿಗೊಳಗಾಗಿದ್ದು, ಬಹುತೇಕ ಎಲ್ಲಾ ಕಂಬಗಳ ದುರಸ್ತಿ ಮಾಡಲಾಗಿದೆ ಎಂದರು.

ADVERTISEMENT

ಅಪಾಯಕಾರಿ ಗಿಡ, ಮರಗಳನ್ನು ತೆರವುಗೊಳಿಸುವಂತೆ ಸೆಸ್ಕ್‌ ಹಾಗೂ ಅರಣ್ಯಇಲಾಖೆಗೆ ಸೂಚನೆ ನೀಡಲಾಗಿದೆ.ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ಯಾವುದೇ ರೀತಿಯ ವ್ಯತ್ಯಯವಾಗದಂತೆ ಎಚ್ಚರ ವಹಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಪ್ರವಾಹದಿಂದ ಹಾನಿಗೊಳಗಾಗಿರುವ ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅದರ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.ಆಗಸ್ಟ್ ತಿಂಗಳ ಮೊದಲ ಹಾಗೂ ಎರಡನೇವಾರದಲ್ಲಿ ಹೆಚ್ಚು ಮಳೆಯಾಗುವುದರಿಂದ ಈಗಿನಿಂದಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕೊರೊನಾ ಪಾಸಿಟಿವಿಟಿ ಶೇಕಡಾ 7 ರಷ್ಟು ಇದೆ.ರಾಜ್ಯ ಸರ್ಕಾರದ ಸೂಚನೆ ಮೇರೆಗೆ ನಿತ್ಯ6500ಕ್ಕೂ ಹೆಚ್ಚು ಕೋವಿಡ್‌ ಪರೀಕ್ಷೆ ಮಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.