ಹೆತ್ತೂರು: ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮನಕೆರೆ (ಆಚಾರ್ ಮನೆ) ಬಸ್ ನಿಲ್ದಾಣ ಕಾಮಗಾರಿ 3 ತಿಂಗಳಾದರೂ ಪೂರ್ಣಗೊಳ್ಳದೇ ಇರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸೋರುವ ಹಂತ ತಲುಪಿದ್ದ ಬಸ್‌ನಿಲ್ದಾಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡಿದ್ದರು. ಶಾಸಕರು ನೂತನ ಬಸ್ ನಿಲ್ದಾಣ ಮಾಡುವುದಕ್ಕೆ ಮನಸ್ಸು ಮಾಡಿ, ತಮ್ಮ ಅನುದಾನದಲ್ಲಿ ಬಸ್ ನಿಲ್ದಾಣ ಮಾಡಿಕೊಡುವ ಭರವಸೆ ನೀಡಿದ್ದರು. ಕಳೆದ ಮೂರು ತಿಂಗಳ ಹಿಂದೆ ಬಸ್ ನಿಲ್ದಾಣದ ಕಾಮಗಾರಿ ಶುರುವಾಗಿತ್ತು. ಮಳೆ ಕಾರಣ ಕಾಮಗಾರಿಯ ಅರ್ಧಕ್ಕೆ ನಿಲ್ಲಿಸಲಾಗಿದೆ.
ಈ ಬಸ್ ನಿಲ್ದಾಣದಲ್ಲಿ ನಿತ್ಯ ವಿದ್ಯಾರ್ಥಿಗಳು ಸೇರಿದಂತೆ ಸಕಲೇಶಪುರ ಹಾಗೂ ಹೆತ್ತೂರಿನ ಕಡೆಗೆ ಹೋಗುವ ಪ್ರಯಾಣಿಕರು ಬಸ್‌ಗಾಗಿ ನಿಲ್ಲುವ ಸ್ಥಳವಾಗಿದೆ. ಈಗ ಬಸ್ ನಿಲ್ದಾಣವಿಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿದೆ. ಗುತ್ತಿಗೆದಾರರು ಯಾರು ಎಂಬುದೇ ಗೊತ್ತಿಲ್ಲ. ಶಾಸಕರ ಅನುದಾನದಲ್ಲಿ ಆಗಿದೆ ಎಂಬುದಷ್ಟೇ ಗ್ರಾಮಸ್ಥರಿಗೆ ತಿಳಿದಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ವಳಲಹಳ್ಳಿ ಬೆಳೆಗಾರರ ಸಂಘದ ಮಾಜಿ ಕಾರ್ಯದರ್ಶಿ ಬೊಮ್ಮನಕೆರೆ ಪಾಲಾಕ್ಷ ಆಗ್ರಹಿಸಿದರು.
ಸುರೇಶ್ ಬೊಮ್ಮನಕೆರೆ, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಾದ ಪ್ರವೀಣ್, ಜಗದೀಶ್, ತ್ಯಾಗರಾಜ್, ಕಿರಣ್, ಗ್ರಾಮಸ್ಥರಾದ ಅರುಣ್, ವೀರೇಶ್, ರುಕ್ಮಿಣಿ, ಆನಂದ್, ಅನಿಲ್, ಇತರರು ಇದ್ದರು.
Highlights - ಶಾಸಕರ ಅನುದಾನದಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಭರವಸೆ ಮಳೆ ಕಾರಣ ನೀಡಿ ಅರ್ಧಕ್ಕೆ ನಿಲ್ಲಿಸಲಾಗಿರುವ ಕಾಮಗಾರಿ ಗುತ್ತಿಗೆದಾರರು ಯಾರೆಂದೇ ಗೊತ್ತಿಲ್ಲ; ಜನರು ಹೈರಾಣ
Cut-off box - ‘ಮಳೆ ನಿಂತರೂ ಶುರು ಮಾಡಿಲ್ಲ’ ಮಳೆ ನಿಂತರೂ ಈ ಬಸ್ ನಿಲ್ದಾಣದ ಕಾಮಗಾರಿ ಶುರು ಮಾಡಿಲ್ಲ. ಗುತ್ತಿಗೆದಾರರು ಯಾರು ಎಂಬುದೇ ಗೊತ್ತಿಲ್ಲ. ಬಸ್ ನಿಲ್ದಾಣವಿಲ್ಲದೇ ಸಾರ್ವಜನಿಕರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡುವ ಮೂಲಕ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರೈತ ವಿಭಾಗದ ತಾಲ್ಲೂಕು ಘಟಕದ ಅಧ್ಯಕ್ಷ ಬೊಮ್ಮನಕೆರೆ ವಸಂತ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.