ADVERTISEMENT

ಅನೈತಿಕ ಸಂಬಂಧಕ್ಕೆ ಅಡ್ಡಿ ಆತಂಕ: ವಿಷ ಹಾಕಿ ಕುಟುಂಬದವರ ಕೊಲೆ ಯತ್ನ– ಮಹಿಳೆ ಸೆರೆ

ಕುಟುಂಬದವರಿಗೆ ಊಟದಲ್ಲಿ ವಿಷ ಹಾಕಿ ಕೊಲೆಗೆ ಯತ್ನಿಸಿದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 13:51 IST
Last Updated 3 ಜೂನ್ 2025, 13:51 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಹಾಸನ: ಬೇಲೂರು ತಾಲ್ಲೂಕಿನ ಕೆರಳೂರು ಗ್ರಾಮದಲ್ಲಿ ಅನೈತಿಕ ಸಂಬಂಧಕ್ಕೆ ತೊಂದರೆ ಆಗುತ್ತದೆ ಎಂಬ ಆತಂಕದಲ್ಲಿ ತನ್ನ ಗಂಡ, ಮಕ್ಕಳು, ಅತ್ತೆ, ಮಾವನಿಗೆ ಊಟದಲ್ಲಿ ವಿಷ ಹಾಕಿ ಕೊಲೆಗೆ ಯತ್ನಿಸಿದ್ದ ಆರೋಪದಡಿ ಆರೋಪಿ ಚೈತ್ರಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಕೆರಳೂರು ಗ್ರಾಮದ ಗಜೇಂದ್ರ ಅವರು 11 ವರ್ಷಗಳ ಹಿಂದೆ ಚೈತ್ರಾಳನ್ನು ಮದುವೆಯಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. 3 ವರ್ಷಗಳಿಂದ ಸಣ್ಣಪುಟ್ಟ ವಿಚಾರಕ್ಕೆ ಗಂಜೇಂದ್ರ ಅವರೊಂದಿಗೆ ಜಗಳ ತೆಗೆಯುತ್ತಿದ್ದ ಚೈತ್ರಾ, ಗಂಡ, ಮಕ್ಕಳಿಗೆ ಬೈಯುತ್ತಿದ್ದಳು. ಈ ಮಧ್ಯೆ ಚೈತ್ರಾಳಿಗೆ, ಪುನೀತ್ ಎಂಬಾತನ ಜೊತೆ ಅನೈತಿಕ ಸಂಬಂಧ ಬೆಳೆದಿತ್ತು. ಈ ವಿಚಾರವನ್ನು ಚೈತ್ರಾಳ ತಂದೆ– ತಾಯಿಗೆ ತಿಳಿಸಿದ್ದು, ರಾಜಿ ಪಂಚಾಯ್ತಿ ಮಾಡಲಾಗಿತ್ತು.

ADVERTISEMENT

2024 ರಿಂದ ಚೈತ್ರಾಳಿಗೆ ಅದೇ ಗ್ರಾಮದ ಶಿವು ಎಂಬಾತನೊಂದಿಗೆ ಅನೈತಿಕ ಸಂಬಂಧ ಬೆಳೆದಿತ್ತು. ಇದಕ್ಕೆ ಗಂಡ, ಮಕ್ಕಳು, ಅತ್ತೆ, ಮಾವ ತೊಂದರೆ ಆಗುತ್ತಾರೆ ಎಂದು ತಿಳಿದ ಚೈತ್ರಾ, ಕುಟುಂಬದವರಿಗೆ ತಿಳಿಯದಂತೆ ಊಟ, ತಿಂಡಿಯಲ್ಲಿ ವಿಷಕಾರಿ ಮಾತ್ರೆ ಹಾಕಿ ಕೊಲೆಗೆ ಯತ್ನಿಸಿದ್ದಾಳೆ. ಈ ಬಗ್ಗೆ ಅನುಮಾನಗೊಂಡ ಪತಿ ಗಜೇಂದ್ರ, ಬೇಲೂರು ಠಾಣೆಗೆ ದೂರು ನೀಡಿದ್ದು, ಆರೋಪಿ ಚೈತ್ರಾಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.