ADVERTISEMENT

ಪ್ರಜ್ವಲ್ ಸ್ಪರ್ಧೆ ವಿರೋಧಿಸಲು ಮಂಜು ಯಾರು: ಪುತ್ರನ ಪರ ರೇವಣ್ಣ ಬ್ಯಾಟಿಂಗ್‌

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 12:05 IST
Last Updated 31 ಜನವರಿ 2019, 12:05 IST
ರೇವಣ್ಣ
ರೇವಣ್ಣ   

ಹಾಸನ: ‘ಲೋಕಸಭೆ ಚುನಾವಣೆಗೆ ಹಾಸನ ಕ್ಷೇತ್ರದ ಅಭ್ಯರ್ಥಿಯಾಗಿ ತಮ್ಮ ಪುತ್ರ ಪ್ರಜ್ವಲ್‌ ರೇವಣ್ಣ ಸ್ಪರ್ಧೆ ಮಾಡುವುದನ್ನು ವಿರೋಧಿಸಲು ಮಂಜು ಯಾರು’ ಎಂದು ಸಚಿವ ಎಚ್‌.ಡಿ.ರೇವಣ್ಣ ಕಿಡಿಕಾರಿದರು.

‘28 ಕ್ಷೇತ್ರಗಳಿಗೂ ಕಾಂಗ್ರೆಸ್‌ ಅರ್ಜಿ ಹಾಕಲಿ, ಬೇಡ ಎಂದವರು ಯಾರು. ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾಗಾಂಧಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ ತೀರ್ಮಾನ ಕೈಗೊಳ್ಳುವರು’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ನಮ್ಮ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ತೀರ್ಮಾನವನ್ನು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ, ಎಚ್ .ಡಿ.ಕುಮಾರಸ್ವಾಮಿ ತೀರ್ಮಾನ ಕೈಗೊಳ್ಳುತ್ತಾರೆ. ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ ಸ್ಪರ್ಧಿಸಬೇಕೋ, ಕಾರ್ಯಕರ್ತರನ್ನು ನಿಲ್ಲಿಸಬೇಕೋ ಎಂಬ ವಿಚಾರವನ್ನು ಪಕ್ಷದ ಶಾಸಕರು, ಮುಖಂಡರು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿರುಗೇಟು ನೀಡಿದರು.

ADVERTISEMENT

ಪ್ರಜ್ವಲ್ ಸರ್ಕಾರಿ ಕಾರು ಬಳಸಿರುವ ಕುರಿತ ಪ್ರಶ್ನೆಗೆ, ‘ಆತನ ಬಳಿಯೇ ಕಾರು ಇರುವುದರಿಂದ ಸರ್ಕಾರಿ ಕಾರು ಬಳಸುವ ಅಗತ್ಯವೇ ಇಲ್ಲ. ಯಾರೋ ಕರೆದಿದ್ದಕ್ಕೆ ಆ ಕಾರು ಹತ್ತಿಕೊಂಡು ಹೋಗಿದ್ದಾನೆ ಅಷ್ಟೇ’ ಎಂದು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.