ADVERTISEMENT

ರಸ್ತೆ ಮೇಲೆ ಮಲಗೋದು ಎಷ್ಟು ಸರಿ?

ಬಿಜೆಪಿ ನಾಯಕರ ವರ್ತನೆಗೆ ಸಚಿವ ರೇವಣ್ಣ ಕಿಡಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 17:28 IST
Last Updated 27 ಜೂನ್ 2019, 17:28 IST
ರೇವಣ್ಣ
ರೇವಣ್ಣ   

ಹಾಸನ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಟೀಕೆ ಮಾಡುತ್ತಿರುವ ಬಿಜೆಪಿ ನಾಯಕರ ವರ್ತನೆಗೆ ಸಚಿವ ಎಚ್.ಡಿ.ರೇವಣ್ಣ ಕಿಡಿ ಕಾರಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಚಾಪೆ ಮೇಲೆ ಮಲಗುತ್ತಾರೋ? ಹಾಸಿಗೆ ಮೇಲೆ ಮಲಗುತ್ತಾರೋ? ಬಡವರ ಕಷ್ಟ ಕೇಳೋದು ಅವರ ಉದ್ದೇಶ. ಗ್ರಾಮವಾಸ್ತವ್ಯ ಮೂಲಕ ಬಡವರ ಕಷ್ಟ ಕೇಳಲು ಹೋದರೆ ಇವರಿಗೇನು? ಎಂದು ಪ್ರಶ್ನಿಸಿದ್ದಾರೆ.

‘ಏನಾದರೂ ಸಮಸ್ಯೆ ಇದ್ದರೆ ಅಥವಾ ಬೇಡಿಕೆ ಇದ್ದರೆ ಶಾಂತಿಯುತವಾಗಿ ಕೇಳಲಿ. ಅದನ್ನು ಬಿಟ್ಟು ಮುಖ್ಯಮಂತ್ರಿ ಅವರನ್ನು ಅಡ್ಡಗಟ್ಟೋದು, ಬಸ್ ತಡೆಯೋದು ಅಥವಾ ರಸ್ತೆ ಮೇಲೆ ಮಲಗೋದು ಎಷ್ಟು ಸರಿ. ರಾಜಕೀಯ ಇರಬಹುದು. ಆದರೆ ಅದರಲ್ಲಿ ದ್ವೇಷ ಮಾಡಬಾರದು’ ಎಂದರು.

ADVERTISEMENT

‘ಜಿಲ್ಲೆಯ ಎಲ್ಲಾ ಜನರು ನಮಗೆ ಮತ ಹಾಕಿಲ್ಲ. ಆದರೂ ನಾನು ಪಕ್ಷಾತೀತವಾಗಿ ಕಡು ಬಡವರಿಗೆ ಪೂರಕವಾದ ಕೆಲಸ ಮಾಡುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.