
ಬಾಗೂರು (ನುಗ್ಗೇಹಳ್ಳಿ ): ನವಿಲೆ ಗ್ರಾಮದ ನಾಗೇಶ್ವರ ಸ್ವಾಮಿ, ಕೆಂಪಮ್ಮ ದೇವಿ ದೇಗುಲದ ನೂತನ ರಥ ಲೋಕಾರ್ಪಣೆ ಅಂಗವಾಗಿ ಫೆಬ್ರುವರಿ 21ಹಾಗೂ 22 ರಂದು ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಪರಮೇಶ್ ತಿಳಿಸಿದರು.
ಸಿದ್ಧತೆಗಳನ್ನು ಪರಿಶೀಲಿಸಿ ಮಾಹಿತಿ ನೀಡಿದ ಅವರು ಭಕ್ತರು ಗ್ರಾಮಸ್ಥರು ಹಾಗೂ ಕ್ಷೇತ್ರದ ಶಾಸಕರಾದ ಸಿ.ಎನ್. ಬಾಲಕೃಷ್ಣ ಹಾಗೂ ವಿವಿಧ ಪಕ್ಷಗಳ ನಾಯಕರ ಸಹಕಾರದಿಂದ₹1 ಕೋಟಿ ವೆಚ್ಚದಲ್ಲಿ ನೂತನ ರಥ ನಿರ್ಮಾಣವಾಗಿದೆ. ರಥದ ಲೋಕಾರ್ಪಣೆ ಅಂಗವಾಗಿ ಫೆ.21ರಂದು ಸಂಜೆ 5 ರಿಂದ ಗಣಪತಿ ಗಂಗೆ ಪೂಜೆ, ಹೋಮ ನಡೆಯಲಿವೆ. 22ರಂದು ಬೆಳಿಗ್ಗೆ ವಿಶೇಷ ಪೂಜೆ, ಅಭಿಷೇಕ, ರಥದ ಲೋಕಾರ್ಪಣೆ ಪೂಜೆಗಳು ನಡೆಯಲಿವೆ ಎಂದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಸುಕ್ಷೇತ್ರ ಕೆರಗೋಡಿ ರಂಗಾಪುರ ಮಠದ ಗುರುಪರದೇಶಿಕೇಂದ್ರ ಸ್ವಾಮೀಜಿ, ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದ ಸ್ವಾಮೀಜಿ ಸಾನಿಧ್ಯ ವಹಿಸುವರು. ಸಂಸದ ಎಂ. ಶ್ರೇಯಸ್ ಪಟೇಲ್ ಉದ್ಘಾಟಿಸುವರು ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡ, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ, ಕೇಂದ್ರ ಮಧ್ಯಮ ಕೈಗಾರಿಕೆ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಬಿ. ಎಂ. ವರಪ್ರಸಾದ್ ರೆಡ್ಡಿ, ಎಸಿ ಜಗದೀಶ್ ಗಂಗಣ್ಣ, ತಹಶೀಲ್ದಾರ್ ಶಂಕರಪ್ಪ, ತಾ.ಪಂ. ಇಒ ಹರೀಶ್ ಹರೀಶ್, ನುಗ್ಗೇಹಳ್ಳಿ ಸೆಸ್ಕ್ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ವಜ್ರ ಕುಮಾರ್, ಪ್ರಮುಖರಾದ ಎ. ಇ. ಚಂದ್ರಶೇಖರ್, .ಚಿದಾನಂದ, ಕುಸುಮ ಬಾಲಕೃಷ್ಣ, ರಥದ ಶಿಲ್ಪಿ ಶಿವಕುಮಾರ್ ಆಚಾರ್ ಭಾಗವಹಿಸುವರು ಎಂದರು.
ರಥ ನಿರ್ಮಾಣ ಸಮಿತಿ ಅಧ್ಯಕ್ಷ ಎನ್. ಸದಾಶಿವಯ್ಯ , ಖಜಾಂಚಿ ಎನ್.ಎನ್. ಕುಮಾರಸ್ವಾಮಿ ಮಾತನಾಡಿ,ರಥದಲ್ಲಿ ಮೂಲ ನಾಗದೇವರ ನವಿಲು, ದೇವರುಗಳ ಕಲಾ ಕೃತಿ, ದೇಶ, ರಾಜ್ಯದ ಲಾಂಛನ ಬಳಸಲಾಗಿದೆ ಎಂದರು. ನವಿಲೆ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್‌ಕೆ ನಾಗಪ್ಪ, ಅರ್ಚಕ ಸಿದ್ದೇಶ್ ಶಾಸ್ತ್ರಿ ಮಾತನಾಡಿದರು.
ರಥ ನಿರ್ಮಾಣ ಸಮಿತಿ ಕಾರ್ಯದರ್ಶಿ ಎನ್. ಜಯದೇವಪ್ಪ, ಕಾರ್ಯದರ್ಶಿ ಕಾಂತರಾಜ್ ಎನ್., ಅರ್ಚಕರಾದ ಶಂಕರ್ ಪ್ರಸಾದ್ ಶಾಸ್ತ್ರಿ, ಅಭಿಷೇಕ್, ಸಂತೋಷ್, ಪ್ರಮುಖರಾದ ಶಾಮಿಯಾನ ಶಿವಕುಮಾರ್, ಎನ್. ಟಿ. ನಿತ್ಯಾನಂದ, ನಿಂಗಪ್ಪ, ಪುಟ್ಟಣ್ಣ, ಶಾಕಿ ಬಸವರಾಜ್, ಸುಧಾಕರ್, ಎನ್.ಸಿ. ನಾಗೇಂದ್ರ, ಎಲ್.ಕೆ. ನಾಗೇಂದ್ರ, ಫೋಟೊ ನಾಗೇಶ್, ಬೇಕರಿ ವಿನಯ್, ಡಿ.ಕೆ. ದಿನೇಶ್, ಸುರೇಶಣ್ಣ, ಸಂಕಾಚಾರ್, ನಾಗಭೂಷಣ್, ಪೆಟ್ ರಾಜು, ದೊಡ್ಮನೆ ಶಿವಣ್ಣ, ಎನ್.ಡಿ. ರಮೇಶ್, ಗಾಂಧಿ ರಾಜಣ್ಣ, ಎನ್.ಡಿ. ಶಿವಕುಮಾರ್, ಶೇಕಿ ನಾಗೇಂದ್ರ, ನಾಗಲಿಂಗೇಶ್, ಲೋಹಿತ್, ಎನ್.ಎಲ್. ನಾಗರಾಜ್ , ಹರೀಶ್, ಯಶವಂತ್ ಶೆಟ್ಟಿ , ಜುಬ್ಬಿ ನಾಗೇಶ್, ರಾಜೇಶ್, ಕಾರ್ಪೆಂಟರ್ ರಾಜಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.