ADVERTISEMENT

ನಗರಸಭೆ ಪೌರಾಯುಕ್ತ, ಸಿಬ್ಬಂದಿ ಮೇಲೆ ಹಲ್ಲೆಗೆ ನೌಕರರ ಖಂಡನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 13:53 IST
Last Updated 18 ಸೆಪ್ಟೆಂಬರ್ 2021, 13:53 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ನಗರಸಭೆ ಅಧ್ಯಕ್ಷ ಆರ್‌.ಮೋಹನ್‌ ಹಾಗೂ ಸಿಬ್ಬಂದಿ ಮತ್ತುಪೌರ ಕಾರ್ಮಿಕರು ಧರಣಿ ನಡೆಸಿದರು
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ನಗರಸಭೆ ಅಧ್ಯಕ್ಷ ಆರ್‌.ಮೋಹನ್‌ ಹಾಗೂ ಸಿಬ್ಬಂದಿ ಮತ್ತುಪೌರ ಕಾರ್ಮಿಕರು ಧರಣಿ ನಡೆಸಿದರು   

ಹಾಸನ: ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ರಾಜ್ಯ ಪೌರ ಸೇವಾ ನೌಕರರ ಸಂಘದ ನೇತೃತ್ವದಲ್ಲಿ ಪೌರಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರುಪ್ರತಿಭಟನೆ ನಡೆಸಲಾಯಿತು.

ಪೌರಕಾರ್ಮಿಕರು, ನೀರು ಗಂಟಿಗಳು, ಕಸ ಸಂಗ್ರಹ ವಾಹನ ಹಾಗೂ ನಗರಸಭೆ ಸಿಬ್ಬಂದಿ ತಮ್ಮ ಕೆಲಸ
ಕಾರ್ಯಗಳನ್ನು ಸ್ಥಗಿತಗೊಳಿಸಿ, ನಗರಸಭೆಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದರು.

ನಗರಸಭೆ ಅಧ್ಯಕ್ಷ ಆರ್‌. ಮೋಹನ್‌, ಹೇಮಾವತಿ ನಗರದಲ್ಲಿರುವ ಯತೀಂದ್ರ ಪ್ಯಾರಾ ಮೆಡಿಕಲ್‌ ಕಾಲೇಜಿನ ಕೋವಿಡ್‌ ಲಸಿಕಾ ಕೇಂದ್ರ ಮಧ್ಯಾಹ್ನ 2 ಗಂಟೆಗೆ ಮುಚ್ಚಲು ಮುಂದಾದ ವೇಳೆ ಪ್ರಶ್ನೆಮಾಡಿದ ನಗರಸಭೆ ಸಿಬ್ಬಂದಿಗಳಾದ ಪ್ರಸಾದ್‌, ರಾಹುಲ್‌, ಪೌರ ಕಾರ್ಮಿಕ ಪರಶುರಾಮ್‌, ವಿಷ್ಣುಹಾಗೂ ಆನಂದ್‌ ಅವರನ್ನು ಕಾಲೇಜಿನ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸ್ಥಳಕ್ಕೆ ಬಂದಪೌರಾಯುಕ್ತ ಕೃಷ್ಣಮೂರ್ತಿ ಅವರನ್ನು ರಸ್ತೆಯಲ್ಲಿ ಎಳೆದಾಡಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆಎಂದರು.

ADVERTISEMENT

ಯತೀಂದ್ರ ಪ್ಯಾರಾ ಮೆಡಿಕಲ್‌ ಕಾಲೇಜಿನ ಪ್ರಾಂಶುಪಾಲ ಕೆ.ಎಸ್‌. ನಾರಾಯಣ್‌, ಕಾರ್ಯದರ್ಶಿ ಪದ್ಮಾ,ಅವರ ಮಕ್ಕಳಾದ ಸುಚಿತ್‌ ನಾರಾಯಣ್‌ ಹಾಗೂ ಸ್ವಾಗತ್‌ ನಾರಾಯಣ್‌ ವಿರುದ್ಧ ನಗರದ ಪೆನ್ಷನ್‌ಮೊಹಲ್ಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವರನ್ನು ಕೂಡಲೇ ಬಂಧಿಸಬೇಕು ಎಂದುಆಗ್ರಹಿಸಿದರು.

ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್‌ ಗೌಡ ಮಾತನಾಡಿ, ಒಂದು ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ಆಡಳಿತ ಮಂಡಳಿ ಈ ರೀತಿಯ ಗುಂಡಾವರ್ತನೆ ಮಾಡಿದರೆ ವಿದ್ಯಾರ್ಥಿಗಳಿಗೆಯಾವ ರೀತಿಯ ಶಿಕ್ಷಣ ಸಿಗಬಹುದು ಎಂಬುದು ತಿಳಿಯುತ್ತದೆ. ರಾಜಕೀಯ ಒತ್ತಡಕ್ಕೆ ಮಣಿಯದೇಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ದಯಾನಂದ, ರಕ್ಷಿತ್‌, ಪ್ರಶಾಂತ್‌ ನಾಗರಾಜ್‌,ಮಂಜುನಾಥ್‌, ಎಂಜಿನಿಯರ್‌ ಪ್ರವೀಣ್‌, ಮಾಜಿ ಸದಸ್ಯರಾದ ಪ್ರಕಾಶ್‌, ಸಮೀರ್‌ ಅಹಮದ್‌, ಗ್ರೀನ್‌ಹಾಸನ್‌ ಫೌಂಡೇಷನ್ ಅಧ್ಯಕ್ಷ ಮಣಿದಾಸ್‌, ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷಪ್ರವೀಣ್‌, ಕಾರ್ಯದರ್ಶಿ ಯೋಗೇಶ್‌, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸಂಚಾಲಕರಾದ ಸುಪ್ರಿತ್‌,ರಾಜೇಶ್‌, ಹರ್ಷನ್‌, ಗಿರೀಶ್‌, ಮೋಹಿತ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.