ADVERTISEMENT

ಮತಾಂತರ ನಿಷೇಧ ಕಾನೂನು ಜಾರಿಗೆ ಆಗ್ರಹ

ಡಿ.ಸಿ ಕಚೇರಿ ಎದುರು ರಾಷ್ಟ್ರ ರಕ್ಷಣಾ ಪಡೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 15:20 IST
Last Updated 8 ಅಕ್ಟೋಬರ್ 2021, 15:20 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ರಾಷ್ಟ್ರ ರಕ್ಷಣಾ ಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ರಾಷ್ಟ್ರ ರಕ್ಷಣಾ ಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು   

ಹಾಸನ: ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿ ರಾಷ್ಟ್ರ ರಕ್ಷಣಾ ಪಡೆಯಿಂದ ಜಿಲ್ಲಾಧಿಕಾರಿ ಕಚೇರಿಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿ, ಮನವಿ ಸಲ್ಲಿಸಿದರು.

‘ರಾಜ್ಯದಲ್ಲಿ ಮತಾಂತರ ಹೆಚ್ಚು ನಡೆಯುತ್ತಿರುವುದರಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಸುವಕಾರ್ಯಕ್ರಮಗಳ ಧ್ವನಿ ಹಾಗೂ ವಿಡಿಯೋ ಚಿತ್ರೀಕರಣವಾಗಬೇಕು. ಅನ್ಯ ಧರ್ಮದವರು ಮನೆ ಮನೆಗೆ ಹೋಗಿ ಧರ್ಮ ಪ್ರಚಾರ ಮಾಡುವುದನ್ನು ನಿಷೇಧಿಸಬೇಕು. ಸಾರ್ವಜನಿಕರು ಸೇರುವ ಸ್ಥಳ, ಶಾಲೆ, ಹೋಟೆಲ್, ಬಸ್ ತಂಗುದಾಣ, ಆಸ್ಪತ್ರೆಗಳಲ್ಲಿ ಯಾವುದೇ ಧರ್ಮದ ಗ್ರಂಥಗಳನ್ನು ಅನ್ಯ ಧರ್ಮದವರಿಗೆ ನೀಡಬಾರದು’ ಎಂದು ಒತ್ತಾಯಿಸಿದರು.

ADVERTISEMENT

‘ಅನ್ಯ ಧರ್ಮದ ಹುಡುಗ ಅಥವಾ ಹುಡುಗಿ ಪ್ರೀತಿಸಿ ಮದುವೆಯಾದರೆ, ಮದುವೆಯಾದ ನಂತರ ಇಬ್ಬರೂ ತಮ್ಮ ಧರ್ಮ ಬದಲಾವಣೆ ಮಾಡಿಕೊಳ್ಳುವಂತಿಲ್ಲ. ಶಾಲಾ, ಕಾಲೇಜು, ಆಸ್ಪತ್ರೆ ಹಾಗೂ ಸಾರ್ವಜನಿಕ ಕಟ್ಟಡಗಳ ಮೇಲೆ ಯಾವುದೇ ಧರ್ಮದ ಚಿಹ್ನೆ ಬಳಸಬಾರದು. ಅನ್ಯ ಧರ್ಮದ ಆಚರಣೆಗಾಗಿ ಮಕ್ಕಳಿಗೆ ಯಾವುದೇ ವೇಷ ಭೂಷಣ ಹಾಕಿಸಬಾರದು. ಖಾಸಗಿ ಸ್ಥಳಗಳಲ್ಲಿ ಅನ್ಯ ಧರ್ಮದವರನ್ನು ಸೇರಿಕೊಂಡು ತಮ್ಮ ಧರ್ಮದ ಪ್ರಚಾರ ಅಥವಾ ಪ್ರಾರ್ಥನೆ ಮಾಡಲು ಅವಕಾಶ ನೀಡಬಾರದು’ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರಿಗೆ ಮನವಿ ಸಲ್ಲಿಸಿದರು.

ರಾಷ್ಟ್ರ ರಕ್ಷಣಾ ಪಡೆ ರಾಜ್ಯಾಧ್ಯಕ್ಷ ಪುನೀತ್ ಕೆರೆಹಳ್ಳಿ, ಜಿಲ್ಲಾಧ್ಯಕ್ಷ ಸುರೇಶ್ ಗೌಡ, ಉಪಾಧ್ಯಕ್ಷ ರಾಮು, ಸಿ.ಎಲ್.
ಕಿರಣ್ ಕುಮಾರ್, ಪ್ರವೀಣ್‌ ಕುಮಾರ್‌, ವಿಜಯ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.