ಹಾಸನ: ‘ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವಿದ್ಯುತ್ ಪೂರೈಕೆ ಕೇಂದ್ರವನ್ನು ವಾಸ್ತು ಪ್ರಕಾರ ಅಳವಡಿಸಿ. ಹತ್ತಾರು ಜನ ಆಸ್ಪತ್ರೆಯಲ್ಲಿ ಉಳಿಯುವುದರಿಂದ ವಾಸ್ತು ಪ್ರಕಾರವೇ ಕೆಲಸ ಮಾಡಿ’ ಎಂದು ಶಾಸಕ ಎಚ್.ಡಿ. ರೇವಣ್ಣ ಅಧಿಕಾರಿಗಳಿಗೆ ಸಲಹೆ ನೀಡಿದರು.
ನಗರದಲ್ಲಿ ಗುರುವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ನಾನು ವಾಸ್ತು ಪ್ರಕಾರ ₹ 200 ಕೋಟಿ ವೆಚ್ಚದಲ್ಲಿ ಎಲ್ಲ ಚಿಕಿತ್ಸಾ ಸೌಲಭ್ಯ ಸಿಗುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಿಸಿದ್ದೇನೆ. ಎಲ್ಲ ಸಿದ್ಧವಿದೆ. ವಿದ್ಯುತ್ ಕೇಂದ್ರವನ್ನು ವಾಸ್ತು ಪ್ರಕಾರ ದಕ್ಷಿಣ ಅಥವಾ ಉತ್ತರ ದಿಕ್ಕಿನಲ್ಲಿ ಹಾಕಬೇಕಾ ನೋಡಿ’ ಎಂದು ಸಲಹೆ ನೀಡಿದರು.
‘ವಿದ್ಯುತ್ ಕೇಂದ್ರಕ್ಕಾಗಿ ಸುಮ್ಮನೆ ಅರ್ಧ ಎಕರೆ ಪ್ರದೇಶ ಬಳಸಬೇಡಿ. 10 ಗುಂಟೆ ಜಾಗ ಸಾಕು. ಒಂದೇ ಕಂಬದಲ್ಲಿ ನಿರ್ಮಿಸಬಹುದೇ ಎಂಬುದನ್ನೂ ನೋಡಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.