ADVERTISEMENT

ಕಾರು ಡಿಕ್ಕಿ: ಗ್ರೂಪ್‌ ಡಿ ನೌಕರ ಸಾವು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 3:15 IST
Last Updated 4 ಅಕ್ಟೋಬರ್ 2020, 3:15 IST
3 ಬಿಎಲ್ಆರ್ ಪಿ-3. . ಹಗರೆ ಸಮೀಪದ ಶಿವಯೋಗಿಪುರ ಗೇಟ್ ಬಳಿ ಕಾರು ಡಿಯೋ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದರಿಂದ ನಜ್ಜುಗುಜ್ಜಾಗಿರುವ ಸ್ಕೂಟರ್.
3 ಬಿಎಲ್ಆರ್ ಪಿ-3. . ಹಗರೆ ಸಮೀಪದ ಶಿವಯೋಗಿಪುರ ಗೇಟ್ ಬಳಿ ಕಾರು ಡಿಯೋ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದರಿಂದ ನಜ್ಜುಗುಜ್ಜಾಗಿರುವ ಸ್ಕೂಟರ್.   

ಬೇಲೂರು: ತಾಲ್ಲೂಕಿನ ಶಿವಯೋಗಿಪುರದಲ್ಲಿಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಚಾಲಕ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಅರೇಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಗ್ರೂಪ್ ಡಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂಜು (30) ಮೃತಪಟ್ಟಿದ್ದಾರೆ. ಹಾಸನದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಡೆಸುತ್ತಿದ್ದ ಮುಷ್ಕರದಲ್ಲಿ ಭಾಗವಹಿಸಿ ವಾಪಸ್‌ ಊರಿಗೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಹಿಂಬದಿ ಸವಾರರಾದ ನಾರಾಯಣ, ಮಮತಾ ಅವರ ಕೈ, ಕಾಲು, ತಲೆಗೆ ಪೆಟ್ಟಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ರಸ್ತೆ ಮೇಲೆ ಸತ್ತು ಬಿದ್ದಿದ್ದ ನಾಯಿ ಮೇಲೆ ಕಾರು ಹತ್ತುವುದನ್ನು ತಪ್ಪಿಸಲು ಯತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.