
ಪ್ರಜಾವಾಣಿ ವಾರ್ತೆ
ಸಕಲೇಶಪುರ: ಇಲ್ಲಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಡಿ.1 ಮತ್ತು ಡಿ.2 ರಂದು ಹಮನುನ ಜಯಂತಿ ನಡೆಯಲಿದೆ ಎಂದು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಜೈಮಾರುತಿ ದೇವರಾಜ್ ಹೇಳಿದರು.
ಸೋಮವಾರ ಬೆಳಿಗ್ಗೆ 10ಕ್ಕೆ ದ್ವಾದಶಿ ರಾಮತಾರಕ ಹೋಮ, ಮಹಾ ಮಂಗಳಾರತಿ, ಸಂಜೆ 6ಕ್ಕೆ ಜೆಎಸ್ಎಸ್ ಶಾಲೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಮಂಗಳವಾರ ಬೆಳಿಗ್ಗೆ ಆಂಜನೇಯ ಹೋಮ ಹಾಗೂ ಪವಮಾನ ಹೋಮ ನಡೆಯಲಿದೆ. ಸಂಜೆ 6 ರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೆಳ್ಳಿ ರಥದೊಂದಿಗೆ 101 ಆಂಜನೇಯ ವೇಷಧಾರಿ ಹಾಗೂ ಚಂಡೆ ಮತ್ತು ವಿವಿಧ ಬಗೆಯ ಕಲಾ ತಂಡಗಳೊಂದಿಗೆ ಉತ್ಸವ ನಡೆಯಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.